LatestMain PostNational

ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು

Advertisements

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಎರಡನೇ ಬಾರಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಬಾರಿ ರಾಹುಲ್ ಗಾಂಧಿಯವರ ಇಡಿ ವಿಚಾರಣೆ ವೇಳೆ ಪ್ರತಿಭಟನೆಯಲ್ಲಿ ಪೊಲೀಸರನ್ನು ಕಂಡು ಕಾಲ್ಕಿತ್ತು ಓಡಿ ಹೋಗಿದ್ದ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಇಂದು ಮತ್ತೆ ಸುದ್ದಿಯಾಗಿದ್ದಾರೆ. ಇಂದು ಕೂಡಾ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದ ಶ್ರೀನಿವಾಸ್ ಕೂದಲನ್ನು ಹಿಡಿದು ಪೊಲೀಸರು ಎಳೆದಾಡಿದ್ದಾರೆ.

ಭಾರೀ ಪ್ರತಿಭಟನೆಯ ಸಂದರ್ಭ ಮಾಧ್ಯಮದವರೊಂದಿಗೆ ಮಾತಾಡಲು ಮುಂದಾದ ಶ್ರೀನಿವಾಸ್‌ನನ್ನು ಪೊಲೀಸರು ಕಾರಿನೊಳಗೆ ತಳ್ಳುವ ಪ್ರಯತ್ನ ಮಾಡಿದ್ದಾರೆ. ಶ್ರೀನಿವಾಸ್ ಕಾರಿನಿಂದ ಹೊರ ಬರುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಅವರ ತಲೆ ಕೂದಲನ್ನು ಹಿಡಿದು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ

ಶ್ರೀನಿವಾಸ್ ಅವರ ಕೂದಲು ಹಿಡಿದು ಎಳೆದಾಡಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ದೆಹಲಿ ಪೊಲೀಸರ ಗಮನಕ್ಕೂ ಬಂದಿದೆ. ಶ್ರೀನಿವಾಸ್ ಅವರೊಂದಿಗೆ ಈ ರೀತಿಯಾಗಿ ವರ್ತಿಸಿರುವ ಸಿಬ್ಬಂದಿಯನ್ನು ನಾವು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿ ಗುರುತು ಸಿಕ್ಕ ಬಳಿಕ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್

Live Tv

Leave a Reply

Your email address will not be published.

Back to top button