ಶಿಲ್ಲಾಂಗ್: ಹೊಸದಾಗಿ ನಿರ್ಮಿಸಲಾಗಿದ್ದ ಮೇಘಾಲಯ ವಿಧಾನಸಭೆಯ ಕಟ್ಟಡದ ಒಂದು ಭಾಗ ಭಾನುವಾರ ಕುಸಿದಿದೆ. ಸದ್ಯ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸುಮಾರು 177.7 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾದ ಸುಮಾರು 70 ಟನ್ ತೂಕದ ಗುಮ್ಮಟ ಮಧ್ಯರಾತ್ರಿ ಸುಮಾರು 12:20 ರ ವೇಳೆಗೆ ಕುಸಿದಿದೆ.
Advertisement
ಮೇಘಾಲಯದ ವಿಧಾನಸಭೆಯ ನೂತನ ಕಟ್ಟಡವನ್ನು ಉತ್ತರ ಪ್ರದೇಶ ಮೂಲದ ಕಂಪನಿ ನಿರ್ಮಿಸಿದ್ದು, ಕುಸಿತ ವಿನ್ಯಾಸದ ದೋಷದಿಂದ ಸಂಭವಿಸಿರಬಹುದು ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ
Advertisement
Advertisement
ಮುಂಜಾನೆ ಸ್ಥಳಕ್ಕೆ ಧಾವಿಸಿದ ಎಂಜಿನಿಯರ್‌ಗಳು ಹೊಸ ಗುಮ್ಮಟವನ್ನು ನಿರ್ಮಿಸಲು ಕನಿಷ್ಟ 8 ತಿಂಗಳು ಬೇಕು ಎಂದು ತಿಳಿಸಿದ್ದಾರೆ. ಇದೀಗ ಕುಸಿತವಾಗಿರುವ ಅವಶೇಷಗಳನ್ನು ತೆರವುಗೊಳಿಸಲು ಇನ್ನೂ 2 ವಾರ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ: ಝೆಲೆನ್ಸ್ಕಿ
Advertisement
ಹೊಸ ಕಟ್ಟಡದ ಕಾಮಗಾರಿಯನ್ನು 2019ರ ಜೂನ್‌ನಲ್ಲಿ ಪ್ರಾರಂಭಿಸಲಾಗಿತ್ತು. ಇದೇ ವರ್ಷ ಆಗಸ್ಟ್ ತಿಂಗಳ ಒಳಗಾಗಿ ಕಾಮಗಾರಿ ಕೆಲಸ ಪೂರ್ಣಗೊಳ್ಳಬೇಕಿತ್ತು.