ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ

Public TV
1 Min Read
MEGHAAA

ಕಿರುತೆರೆಯ ಫೇಮಸ್ ನಟಿ ಮೇಘಾ ಶೆಟ್ಟಿ `ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಅನು ಸಿರಿಮನೆ ಪಾತ್ರದಿಂದ ಕರ್ನಾಟಕದ ಮನೆಮಗಳಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

meghaಸದ್ಯ ಸೀರಿಯಲ್, ಸಿನಿಮಾ ಅಂತಾ ಬ್ಯುಸಿಯಿರೋ ಕಿರುತೆರೆ ಬ್ಯೂಟಿ ಮೇಘಾ, ಮಹೇಶ್ ಬಾಬುರನ್ನ ಯಾಕೆ ಭೇಟಿಯಾದ್ರು ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನಟ ಮಹೇಶ್ ಬಾಬು ಜೊತೆ ಕ್ಲಿಕಿಸಿಕೊಂಡಿರೋ ಫೋಟೋ ನೋಡಿ ಅವರ ಸಿನಿಮಾ ಮಾಡ್ತಿದ್ದಾರೆ ಅನ್ನೋ ಚರ್ಚೆ ಆಗ್ತಿತ್ತು. ಆದರೆ, ಆ ರೀತಿ ಏನು ಇಲ್ಲ. ಜಾಹಿರಾತು ವೊಂದರಲ್ಲಿ ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸಿ ಬಂದಿದ್ದಾರೆ.

megha shetty

ಕಿರುತೆರೆಯಲ್ಲೇ ಭಾರೀ ಡಿಮ್ಯಾಂಡ್‌ಯಿರೋವಾಗಲೇ ಬೆಳ್ಳಿತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. `ದಿಲ್‌ಪಸಂದ್’ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

meghashetty officiall 254334885 4423676657700438 6748989961275439961 nಸಡಗರ ರಾಮಚಂದ್ರ ನಿರ್ದೇಶನದ ಹೆಸರಿಡದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ `ಕೆಂಡಸಂಪಿಗೆ’ ಧಾರಾವಾಹಿ ನಿರ್ಮಾಣ ಕೂಡ ಮಾಡಿದ್ದಾರೆ. ಹೀಗೆ ಬಣ್ಣದ ಲೋಕದಲ್ಲಿ ನೆಚ್ಚಿನ ನಟಿ ಮೇಘಾ ಆಕ್ಟಿವ್ ಆಗಿರಲಿ ಎಂಬುದೇ ಅಭಿಮಾನಿಗಳ ಆಶಯ.

Share This Article
Leave a Comment

Leave a Reply

Your email address will not be published. Required fields are marked *