ಬಿಳಿ ಕಾಸ್ಟ್ಯೂಮ್ ನಲ್ಲಿ ಮೇಘಾ ಶೆಟ್ಟಿ ಹೊಸ ಹಾಟ್ ಫೋಟೋಶೂಟ್

Public TV
2 Min Read
Megha

ಕಿರುತೆರೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೇಘಾ ಶೆಟ್ಟಿ (Megha Shetty) ಮತ್ತೊಂದು ಹೊಸ ಫೋಟೋಶೂಟ್ (photo shoot) ನಲ್ಲಿ ಕಂಗೊಳಿಸಿದ್ದಾರೆ. ಬಿಳಿ ಕಾಸ್ಟ್ಯೂಮ್ ನಲ್ಲಿ ಮಿರಿ ಮಿರಿ ಮಿಂಚಿರುವ ಅವರು ನೀರಿನ ಮಧ್ಯ ಬೆಡ್ ಹಾಕಿ, ಅದರ ಮೇಲೆ ಕೂತಿರುವ ಮೇಘಾ, ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Megha shetty 2

ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಅಂತ್ಯವಾಗಿದೆ. ಅನು ಸಿರಿಮನೆ ಪಾತ್ರದ ಮೂಲಕ ಮನೆ ಮಾತಾದ ಈ ನಟಿ (Megha Shetty) ಇದೀಗ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಕಿರುತೆರೆಗಿಂತಲೂ ಹೆಚ್ಚು ಸಿನಿಮಾ ರಂಗದಲ್ಲೇ ತೊಡಗಿಕೊಳ್ಳುವ ಮಾತುಗಳನ್ನು ಆಡಿದ್ದಾರೆ.

Megha shetty 4

ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಸೀರಿಯಲ್ ಕಥೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆರ್ಯ- ಅನು ಸಿರಿಮನೆ ಲವ್ ಸ್ಟೋರಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಮೊನ್ನೆಯಷ್ಟೇ  ಸೀರಿಯಲ್ ಅಂತ್ಯವಾಗಿದೆ. ಈ ಧಾರಾವಾಹಿಯು ಮೇಘಾಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

Megha shetty 6

ಜೊತೆ ಜೊತೆಯಲಿ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ಇದೇ ಮೇಘಾ ಮೇಘಾ ಶೆಟ್ಟಿ. ಕೊನೆಯ ದಿನದ ಚಿತ್ರೀಕರಣ ಕೂಡ ಇವರಿಂದನೇ ಮುಕ್ತಾಯ ಹಾಡಿದೆ. ಯಾರೂ ಪರಿಚಯವಿಲ್ಲದೇ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿಗಿನ ನಂಟನ್ನು ಮುಗಿಸುತ್ತಿದ್ದೇನೆ ಎಂದು ಮೊನ್ನೆಯಷ್ಟೇ ಭಾವುಕರಾಗಿ ಮೇಘಾ ಹೇಳಿಕೊಂಡಿದ್ದರು.

Megha shetty 7

ಅನು ಸಿರಿಮನೆ ನನಗೆ ಎಲ್ಲವನ್ನೂ ನೀಡಿದ್ದಾಳೆ. ನನಗೆ ಸಿಗುತ್ತಿರುವ ಸಿನಿಮಾಗಳು, ಜನರ ಪ್ರಿತಿ ಇವೆಲ್ಲದಕ್ಕೂ ಜೊತೆ ಜೊತೆಯಲಿ ಸೀರಿಯಲ್ ಮಾತ್ರ ಕಾರಣ. ಸಾವಿರ ಎಪಿಸೋಡ್‌ವರೆಗೂ ರೀಚ್ ಆಗಬೇಕು ಎಂದುಕೊಂಡಿದ್ದೆವು. ಅದರಂತೆ ಮುಗಿಸುತ್ತಿದ್ದೇವೆ ಎಂದು ಮೇಘಾ ಶೆಟ್ಟಿ ಮೊನ್ನೆ ಮಾತನಾಡಿದ್ದರು.

Megha shetty 8

ಮೇಘಾ ಶೆಟ್ಟಿ ಮುಂದಿನ ದಿನಗಳಲ್ಲಿ ಯಾವುದೇ ಸೀರಿಯಲ್ ನಟಿಸದಿರಲು ನಿರ್ಧರಿಸಿದ್ದಾರಂತೆ. ಇನ್ನೆನಿದ್ದರೂ ಸಿನಿಮಾಗಳತ್ತ ಮಾತ್ರ ನನ್ನ ಗಮನ. ಒಳ್ಳೊಳ್ಳೆ ಕಥೆಗಳನ್ನು ಕೇಳುತ್ತಿದ್ದೇನೆ. ಈಗ ನಟಿಸಿರುವ ‘ಕೈವ’ (Kaiva) ಮತ್ತು ‘ಆಪರೇಷನ್ ಲಂಡನ್ ಕೆಫೆ’ (Operation London Cafe) ಸಿನಿಮಾ ಚೆನ್ನಾಗಿದೆ. ಈ ಎರಡೂ ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕಥೆಗಳ ನಿರೀಕ್ಷೆಯಲ್ಲಿದ್ದೇನೆ ಎಂದು ನಟಿ ಮೇಘಾ ಪ್ರತಿಕ್ರಿಯೆ ನೀಡಿದ್ದಾರೆ.

Megha shetty 9

ಮೊನ್ನೆಯಷ್ಟೇ ಮೇಘಾ ಶೆಟ್ಟಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ  ‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡ ಮುಡಿ ತುಂಬಾ ಮಲ್ಲಿಗೆ ಮುಡಿದು ಮುದ್ದು ಮುದ್ದಾಗಿ ಕಾಣಿಸುವ ಮೇಘಾ ಶೆಟ್ಟಿಯ ಕಲರ್ಫುಲ್ ಪೋಸ್ಟರ್ ಬಿಡುಗಡೆ ಮಾಡಿ, ಶುಭ ಕೋರಿದ್ದರು.

Share This Article