ನಟ ಆಮೀರ್ ಖಾನ್, ಕಿರಣ್ ರಾವ್ ಅವರಿಗೆ ಡಿವೋರ್ಸ್ ಕೊಟ್ಟ ಮೇಲೆ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿಯ ಜೊತೆ ಆಮೀರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಈ ಬಗ್ಗೆ ಸಿನಿಮಾ ವಿಮರ್ಶಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ:‘ಸಲಾರ್’ ಅಡ್ಡಾಗೆ ಎಂಟ್ರಿ ಕೊಟ್ಟ ಕನ್ನಡದ ನಟ ಸೌರವ್ ಲೋಕಿ
ಆಮೀರ್ ಖಾನ್, ಅವರು ಇದೀಗ ಸಿನಿಮಾಗಿಂತ ವೈಯಕ್ತಿಕ ವಿವಾರವಾಗಿಯೇ ಭಾರಿ ಸುದ್ದಿ ಆಗ್ತಿದ್ದಾರೆ. ಮಗಳ ವಯಸ್ಸಿನ ಹುಡುಗಿ ಫಾತಿಮಾ ಜೊತೆ ಆಮೀರ್ ಮದುವೆ ಆಗ್ತಿದ್ದಾರೆ ಅಂತಾ ಬಾಲಿವುಡ್ ಅಂಗಳಲ್ಲಿ ಗುಸು ಗುಸು ಶುರುವಾಗಿದೆ. ಈ ಸುದ್ದಿಗೆ ಸಿನಿಮಾ ಮಿಮರ್ಶಕನ ಟ್ವೀಟ್ ಕೂಡ ಸದ್ದು ಮಾಡ್ತಿದೆ.
Breaking News:- Aamir Khan is going to get married with his daughter’s age Fatima Sana Shaikh soon. Aamir Khan is dating Sana from the time of their film #Dangal.
— KRK (@kamaalrkhan) May 25, 2023
ಬ್ರೇಕಿಂಗ್ ನ್ಯೂಸ್- ಆಮೀರ್, ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಲಿದ್ದಾರೆ. ಆಮೀರ್ ಖಾನ್ ತಮ್ಮ ‘ದಂಗಲ್’ ಸಿನಿಮಾ ಸಮಯದಿಂದಲೂ ಸನಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ನಟಿ ಫಾತಿಮಾಗೆ, ಆಮೀರ್ ಖಾನ್ ಕುಟುಂಬದ ಜೊತೆ ಹೆಚ್ಚು ಆಪ್ತತೆ ಇದೆ. ಆಮೀರ್ ಪುತ್ರಿ ಇರಾ ಖಾನ್ ಜೊತೆ ಒಳ್ಳೆಯ ಬಾಂದವ್ಯವಿದೆ. ಹಾಗಾಗಿ ಈ ಸುದ್ದಿಗೆ ಆಮೀರ್- ಫಾತಿಮಾ ಮದುವೆ ಸುದ್ದಿ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಆಮೀರ್ ನಟನೆಯ ‘ದಂಗಲ್’, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಕಮಾಲ್ ಆರ್. ಖಾನ್ ಅವರ ವಿವಾದತ್ಮಕ ಟ್ವೀಟ್ಗೆ ಆಮೀರ್ ಖಾನ್ ಸ್ಪಷ್ಟನೆ ನೀಡುವವರೆಗೂ ಕಾದುನೋಡಬೇಕಿದೆ.