ನ್ಯಾಚುರಲ್ ನಾನಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಡೈರೆಕ್ಟರ್ ಶ್ರೀಕಾಂತ್ ಒಡೆಲ ನಿರ್ದೇಶನದ ಸಿನಿಮಾಗೆ ನಾನಿ (Nani) ಸಾಥ್ ನೀಡುತ್ತಿದ್ದಾರೆ. ಇದೀಗ ಚಿತ್ರತಂಡ ಚಿರಂಜೀವಿ ಜೊತೆಗಿನ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಇದನ್ನೂ ಓದಿ:ಮಾದಕ ವ್ಯಸನಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಉಪೇಂದ್ರ
ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ (Srikanth Odela) ಇಬ್ಬರೂ ಕೈಯನ್ನು ರಕ್ತದಲ್ಲಿ ಅದ್ದಿ ಪರಸ್ಪರ ಕೈ ಹಿಡಿದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಇದು ರಕ್ತದಲ್ಲಿ ಮಾಡಿದ ಪ್ರತಿಜ್ಞೆ’ ಎಂಬ ಅಡಿಬರಹ ಕೊಟ್ಟಿದ್ದಾರೆ. ಪೋಸ್ಟರ್‌ನಲ್ಲಿ ‘ಇವನಿಗೆ ಶಾಂತಿ ಸಿಗುವುದು ಹಿಂಸೆಯಲ್ಲೇ’ ಎಂಬ ಸಾಲು ಬರೆಯಲಾಗಿದೆ. ರಕ್ತದ ಮೆತ್ತಿದ ಕೈನ ಚಿತ್ರ ಪೋಸ್ಟರ್‌ನಲ್ಲಿದೆ.
View this post on Instagram
ಇನ್ನೂ ಚಿರಂಜೀವಿ ಎಂದೂ ನಟಿಸಿರದ ಪವರ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ನಾನಿ ನಿರ್ಮಾಣ ಮಾಡುವುದರ ಜೊತೆಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪಕ್ಕಾ ವಯಲೆನ್ಸ್ ಕತೆಯನ್ನು ಹೇಳೋಕೆ ಮುಂದಾಗಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.