ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಸಿನಿಮಾದ ಬಗ್ಗೆ ಬಿಗ್ ನ್ಯೂಸ್ ಸಿಕ್ಕಿದೆ. ‘ಭಗವಂತ ಕೇಸರಿ’ ಡೈರೆಕ್ಟರ್ ಅನಿಲ್ ರವಿಪುಡಿ (Anil Ravipudi) ಜೊತೆ ಸಿನಿಮಾ ಮಾಡಲು ಚಿರಂಜೀವಿ ಕೈಜೋಡಿಸಿದ್ದಾರೆ.
ಸಿನಿಮಾ ಸಮಾರಂಭವೊಂದರಲ್ಲಿ ಮುಂದಿನ ಸಿನಿಮಾ ಬಗ್ಗೆ ಚಿರಂಜೀವಿ ಮಾತನಾಡಿ, ಅನಿಲ್ ರವಿಪುಡಿ ಜೊತೆ ಸಿನಿಮಾ ಮಾಡುತ್ತಿರೋದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ವಿಭಿನ್ನ ಕಥೆಯಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್
ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ನಟಿಸುತ್ತಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗುತ್ತಿದೆ. ಹಾಗಂತ ಫ್ಯಾನ್ಸ್‌ಗೆ ಅವರ ಮೇಲಿರುವ ಕ್ರೇಜ್ ಹಾಗೂ ಅವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಬಿಗ್ ಬಜೆಟ್ ಸಿನಿಮಾಗಳೇ ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರು ಸ್ಟಾರ್ ನಿರ್ದೇಶಕ ಅನಿಲ್ ರವಿಪುಡಿ ಚಿತ್ರಕ್ಕೆ ಚಿರಂಜೀವಿ ಓಕೆ ಎಂದಿದ್ದಾರೆ.
ಅಂದಹಾಗೆ, ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ವಿಶ್ವಂಭರ’ ಚಿತ್ರವು ಮೇ 9ರಂದು ರಿಲೀಸ್ ಆಗಲಿದೆ. ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ಮೀನಾಕ್ಷಿ, ಆಶಿಕಾ ರಂಗನಾಥ್, ರಾವ್ ರಮೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನೂ ಈ ಸಿನಿಮಾದ ಜೊತೆ ನಾನಿ ನಿರ್ಮಾಣದ ಸಿನಿಮಾ ಕೂಡ ಚಿರಂಜೀವಿ ಒಪ್ಪಿಕೊಂಡಿದ್ದಾರೆ.