ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್‌ಗೂ ಮುನ್ನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ವಿಶ್ವಂಭರ ಒಂದೇ ಸಿನಿಮಾ ಅಲ್ಲ, ಬೇರೇ ಬಿಗ್ ಪ್ರಾಜೆಕ್ಟ್‌ಗಳು ಚಿರಂಜೀವಿ ಕೈಯಲ್ಲಿವೆ ಎಂದು ರಾಮ್ ಚರಣ್ ರಿವೀಲ್ ಮಾಡಿದ್ದಾರೆ.
ವಿಶ್ವ ಅಪ್ಪಂದಿರ (ಜೂನ್ 16) ಪ್ರಯುಕ್ತ ಚಿರಂಜೀವಿಗೆ ಪುತ್ರ ರಾಮ್ ಚರಣ್ (Ram Charan) ವಿಶೇಷ ಸಂದರ್ಶನವನ್ನು ಮಾಡಿದ್ದಾರೆ. ಚಿರಂಜೀವಿ 4 ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ರಾಮ್ ಚರಣ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಜಾಗಕ್ಕೆ ‘ಡಬಲ್ ಇಸ್ಮಾರ್ಟ್’ ಎಂಟ್ರಿ- ರಿಲೀಸ್ ಡೇಟ್ ಫಿಕ್ಸ್
ಇದೀಗ ನಾನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆದರೆ ತಂದೆ, 4 ಸಿನಿಮಾ ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾರ ನಿರ್ದೇಶನ, ಟೈಟಲ್ ಏನು ಎಂಬುದರ ಬಗ್ಗೆ ರಾಮ್ ಚರಣ್ ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಚಿತ್ರಗಳ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಸದ್ಯ ಚಿರಂಜೀವಿ ‘ವಿಶ್ವಂಭರ’ ಸಿನಿಮಾದ ಕೆಲಸ ನಡೆಯುತ್ತಿದೆ. ಈ ಚಿತ್ರದಲ್ಲಿ ಚಿರಂಜೀವಿ ಜೊತೆ ತ್ರಿಷಾ, ಕನ್ನಡದ ನಟಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.