ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕೊನೆಗೂ ಮಣಿದಿದ್ದಾರೆ. ಒಂದರ ಹಿಂದೊಂದು ಸಿನಿಮಾ ಸೋಲುತ್ತಿವೆ. ಈಗಲೂ ಅದೇ ರೋಮ್ಯಾನ್ಸ್, ಇಬ್ಬಿಬ್ಬರ ನಾಯಕಿಯರ ಜೊತೆ ಸುತ್ತಾಟ ಡ್ಯುಯೇಟ್ ಸಾಂಗ್ ಬೇಕಿಲ್ಲ ಎಂದು ಜನರು ತೀರ್ಮಾನಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟಿದ್ದಾರೆ ಮೆಗಾಸ್ಟಾರ್. ಹಾಗಿದ್ದರೆ ಅದೇನು ಬದಲಾವಣೆ ಮಾಡಿಕೊಂಡರು ಚಿರಂಜೀವಿ? ರಜನಿಕಾಂತ್ ಹಾಗೂ ಕಮಲ್‌ಹಾಸನ್ ಹಾದಿಯನ್ನೇಕೆ ತುಳಿಯಲು ಮನಸು ಮಾಡಿದರು? ಇಲ್ಲಿದೆ ಮಾಹಿತಿ.
ಒಂದು ಕಾಲದಲ್ಲಿ ಚಿರಂಜೀವಿ ಮುಟ್ಟಿದ್ದೆಲ್ಲ ಚಿನ್ನ. ಮಾಡಿದ ಸಿನಿಮಾಗಳೆಲ್ಲ ಸೂಪರ್‌ಹಿಟ್. ಚಿರಂಜೀವಿ (Chiranjeevi) ಸಿನಿಮಾ ರಿಲೀಸ್ ಆಗಿ ಒಂದು ವಾರ ಆಯ್ತು, ಇನ್ನೂ ನೋಡಿಲ್ವಾ? ಹೀಗೆ ಕೇಳುತ್ತಿದ್ದರು ಅಖಂಡ ಆಂಧ್ರದ ಜನತೆ. ಮೊದಲ ಬಾರಿ ಕೋಟಿ ರುಪಾಯಿ ಸಂಭಾವನೆ ಪಡೆದು ಇಂಡಿಯಾ ಇತಿಹಾಸದಲ್ಲಿ ಹೊಸ ಧಮಾಕಾ ಸೃಷ್ಟಿಸಿದ್ದರು. ಆದರೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆ ಖಬರ್ ಕಾಣುತ್ತಿಲ್ಲ. ಖೈದಿ ನಂ.150 ಹಿಟ್ ಆಯಿತು. ಆದರೆ ಇತ್ತೀಚಿನ ಸಿನಿಮಾ ಮಕಾಡೆ ಮಲಗುತ್ತಿವೆ. ಆಚಾರ್, ವಾಲ್ಟರ್ ವೀರಯ್ಯ, ಗಾಡ್‌ಫಾದರ್ ಮತ್ತು ಭೋಳಾ ಶಂಕರ್. ಇದೆಲ್ಲ ಚಿರಂಜೀವಿ ನಿದ್ದೆ ಕೆಡಿಸಿವೆ. ಪರಿಣಾಮ, ಜೈಲರ್ ರಜನಿಕಾಂತ್ (Rajanikanth)- ವಿಕ್ರಮ್ ಕಮಲ್ ಹಾಸನ್ (Kamal Haasan) ಹಾದಿ ಹಿಡಿದಿದ್ದಾರೆ ಮೆಗಾಸ್ಟಾರ್. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್
ಚಿರಂಜೀವಿ ಅಭಿನಯದ 157 ಸಿನಿಮಾ ಮಹೂರ್ತಕ್ಕೆ ಸಜ್ಜಾಗಿದೆ. ಇದನ್ನು ವಸಿಷ್ಠ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಮೂವರು ನಾಯಕಿಯರಿದ್ದಾರೆ. ಐಶ್ವರ್ಯ ರೈ(Aishwarya Rai), ಅನುಷ್ಕಾ ಶೆಟ್ಟಿ- ಮೃಣಾಲ್ ಠಾಕೂರ್ (Mrunal Thakur) ಸಿನಿಮಾದ ಭಾಗವಾಗ್ತಿದ್ದಾರೆ.
ಆದರೆ ಮೂವರಿದ್ದರೂ ಚಿರು ರೊಮ್ಯಾನ್ಸ್ ಮಾಡಲ್ಲ ಡ್ಯುಯೇಟ್ ಹಾಡಲ್ಲ. ಕಾರಣ ತಮ್ಮ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದಾರೆ. ಫೈಟಿಂಗ್ ಹಾಡು ಇದ್ದರೂ ಅದು ಸಿಂಗಲ್ ಸಿಂಗಲ್. ದಶಕಗಳ ಹಿಂದೆ ಬಂದ ಜಗದೇಕವೀರುಡು ಅತಿಲೋಕ ಸುಂದರಿ ಸಿನಿಮಾದಂತೆ ಫಿಕ್ಷನ್ ಕತೆ. ಅದನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ಚಿರುಜೀವಿ ಹೊಸ ನಿರ್ಣಯ ಅವರ ಗೆಲುವಿಗೆ ಕಾರಣವಾಗುತ್ತಾ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]