ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Mega Star Chiranjeevi) ಮಾಜಿ ಅಳಿಯ, ಶ್ರೀಜಾ ಅವರ ಮೊದಲ ಮಾಜಿ ಪತಿ ಶಿರೀಶ್ ಭಾರದ್ವಾಜ್ (Sirish Bharadwaj) ನಿಧನರಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Advertisement
ಮೂಲಗಳ ಪ್ರಕಾರ, ಶಿರೀಶ್ ಭಾರದ್ವಾಜ್ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು (ಜೂನ್ 19) ಬೆಳಗ್ಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ:‘ಕುರುಕ್ಷೇತ್ರ’ ಸೆಟ್‌ನಲ್ಲಿ ಪವಿತ್ರಾರನ್ನು ಏನೆಂದು ಪರಿಚಯಿಸಿದ್ರು ದರ್ಶನ್? ‘ಕಾಟೇರ’ ನಟ ಹೇಳಿದಿಷ್ಟು
Advertisement
Advertisement
ಅಂದಹಾಗೆ,ಶಿರೀಶ್ ಮತ್ತು ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ (Sreeja) ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಶ್ರೀಜಾ ಮನೆಯಿಂದ ಹೊರ ನಡೆದಿದ್ದರು. ಬಳಿಕ ಶ್ರೀಜಾ ಮತ್ತು ಶಿರೀಶ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಕೆಲ ಮನಸ್ತಾಪಗಳಿಂದ ಶ್ರೀಜಾ ತನ್ನ ಪುತ್ರಿಯೊಂದಿಗೆ ಮತ್ತೆ ತಂದೆ ಚಿರಂಜೀವಿ ಮನೆಗೆ ವಾಪಸ್ ಆಗಿದ್ರು.
Advertisement
2012ರಲ್ಲಿ ಶ್ರೀಜಾ ಕಿರುಕುಳ ನೀಡಿದ್ದಕ್ಕಾಗಿ ಶಿರೀಶ್ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ನಂತರ 2014ರಲ್ಲಿ ಶ್ರೀಜಾ ಅವರು ಶಿರೀಶ್ ಭಾರದ್ವಾಜ್‌ಗೆ ಡಿವೋರ್ಸ್ ನೀಡಿದ್ದರು. ಇದೀಗ ಶಿರಿಷ್ ಭಾರದ್ವಾಜ್ ಬಾರದ ಲೋಕಕ್ಕೆ ಹೋಗಿದ್ದಾರೆ. ಸದ್ಯ ಶಿರೀಶ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.