ಬೆಂಗಳೂರು: ಮಾಜಿ ಸಚಿವ ಗಣಿಧಣಿ ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತಮ್ಮ ವಕೀಲ ಚಂದ್ರಶೇಖರ್ ಜೊತೆ ಸಿಸಿಬಿಗೆ ಹಾಜರಾಗಿದ್ದರು. ಆದರೆ ಇಂದು ರೆಡ್ಡಿಯ ಡೀಲ್ ಕೇಸಿನಲ್ಲಿ ಮೆಗಾ ಟ್ವಿಸ್ಟ್ ಸಿಕ್ಕಿದೆ.
`ಡೀಲ್’ ರೆಡ್ಡಿ ವಿರುದ್ಧ ಸಾಕ್ಷ್ಯ ಕಲೆಹಾಕಲು ಸಿಸಿಬಿ ಕಸರತ್ತು ನಡೆಸುತ್ತಿದ್ದು, ಸತತ 16 ಗಂಟೆಗಳಿಂದ ಗಣಿಧಣಿ ರೆಡ್ಡಿಗೆ ಫುಲ್ ಗ್ರಿಲ್ ಮಾಡುತ್ತಿದ್ದಾರೆ. ಆದರೂ ರೆಡ್ಡಿ ವಿರುದ್ಧ ಸಿಸಿಬಿಗೆ ಪೂರಕ ಸಾಕ್ಷ್ಯ ಸಿಕ್ಕಿಲ್ವಾ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ಸಿಸಿಬಿ ಪೊಲೀಸರು ತಡರಾತ್ರಿ ಮತ್ತೊಬ್ಬರನ್ನ ವಶಕ್ಕೆ ಪಡೆದಿದ್ದು, ರೆಡ್ಡಿ ವಿರುದ್ಧ ಸಾಕ್ಷಿ ನುಡಿಯಲು ಬಂದ ಆತ ಬೇರಾರು ಅಲ್ಲ ಬಿಲ್ಡರ್ ಬ್ರಿಜೇಶ್ ರೆಡ್ಡಿ ಆಪ್ತನಾಗಿದ್ದಾರೆ. ಅಂಬಿಡೆಂಟ್ ಮಾಲೀಕ ಫರೀಧ್ ಮತ್ತು ರೆಡ್ಡಿ ನಡುವೆ ಡೀಲ್ ಕುದುರಿಸಿದ್ದೇ ಬ್ರಿಜೇಶ್ ರೆಡ್ಡಿ. ಈತನ ಎಲ್ಲಾ ಚಟುವಟಿಕೆಗಳಿಗೂ ಬ್ರಿಜೇಶ್ ಆಪ್ತ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಅಂತೆಯೇ ತಾಜ್ ವೆಸ್ಟೆಂಡ್ ನಲ್ಲಿ ಕುದುರಿದ ಡೀಲ್‍ಗೂ ಬ್ರಿಜೇಶ್ ರೆಡ್ಡಿ ಆಪ್ತ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಹೀಗಾಗಿ ಬ್ರಿಜೇಶ್ ರೆಡ್ಡಿ ಆಪ್ತನನ್ನು ಕರೆತಂದು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯಕ್ಕೆ ಸಿಸಿಬಿ ಪೊಲೀಸರು ರೆಡ್ಡಿ ವಿರುದ್ಧ ಪೂರಕ ಸಾಕ್ಷಿ ಕಲೆ ಹಾಕುತ್ತಿದ್ದಾರೆ.
Advertisement
Advertisement
ಪ್ರಕರಣದ ಕುರಿತಂತೆ ಸಿಸಿಬಿಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ರೆಡ್ಡಿ ಬಂಧನಕ್ಕೆ ಬೇಕಾಗಿರುವ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಶನಿವಾರ ಸಂಜೆ 4 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೂ ಸಿಸಿಬಿ ರೆಡ್ಡಿ ಹೇಳಿಕೆಯನ್ನು ಪಡೆದಿದೆ. ಸತತ 10 ಗಂಟೆಗಳ ಕಾಲ ರೆಡ್ಡಿಯನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ರೆಡ್ಡಿ, ಅಲಿಖಾನ್, ಫರೀದ್ ಹೇಳಿಕೆಯಲ್ಲಿ ವ್ಯತ್ಯಾಸ ಬರುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಮತ್ತೊರ್ವ ವ್ಯಕ್ತಿಯನ್ನು ಕರೆ ತಂದಿದ್ದು, ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡದಿಂದ ಮತ್ತೊಬ್ಬ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಹೊರಬೀಳುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮಧ್ಯಾಹ್ನ ತಮ್ಮ ವಕೀಲ ಚಂದ್ರಶೇಖರ್ ಜೊತೆ ಸಿಸಿಬಿಗೆ ಹಾಜರಾಗಿದ್ದರು. ಇದಕ್ಕೂ ಮೊದಲು ವಿಡಿಯೋ ಮಾಡಿ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದರು. ವಿಡಿಯೋದಲ್ಲಿ ಕಳೆದ ನಾಲ್ಕು ದಿನಗಳಿಂದ ನನ್ನ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ವಕೀಲರ ಸಲಹೆಯ ಮೇರೆಗೆ ಈ ವಿಡಿಯೋವನ್ನು ಮಾಡಿದ್ದೇನೆ. ಪೊಲೀಸರು ಕೆಟ್ಟ ಉದ್ದೇಶದಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಿಸಿಬಿ ಕಚೇರಿಗೆ ಹೋಗಿ ಸ್ಪಷ್ಟನೆ ನೀಡಲು ತೀರ್ಮಾನಿಸಿದಾಗ, ವಕೀಲರು ನಮಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ಎಫ್‍ಐಆರ್ ನಲ್ಲಿ ನಿಮ್ಮ ಹೆಸರಿಲ್ಲ. ಯಾವ ಕಾರಣಕ್ಕಾಗಿ ಸಿಸಿಬಿಗೆ ಹೋಗಬೇಕೆಂದು ತಿಳಿಸಿದ್ದರು ಅಂತ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews