ಟಾಲಿವುಡ್ ನಟಿ, ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ಇತ್ತೀಚಿಗೆ ತಮ್ಮ ಡಿವೋರ್ಸ್ (Divorce) ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಈಗ ಸಿಂಗಲ್ ಲೈಫ್ ಲೀಡ್ ಮಾಡ್ತಿರೋ ನಟಿ, ತಮ್ಮ ಬದುಕಿನ ಬಗ್ಗೆ ಗಟ್ಟಿ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ನಿಹಾರಿಕಾ ನಡೆ ಮೆಗಾ ಫ್ಯಾಮಿಲಿ ಖುಷಿ ಇಲ್ವಂತೆ. ಕುಟುಂಬದ ವಿರೋದಧ ನಡುವೆಯೂ ನಿಹಾರಿಕಾ ಹೊಸ ಹೆಜ್ಜೆ ಇಡ್ತಿದ್ದಾರೆ. ಏನದು? ಇಲ್ಲಿದೆ ಮಾಹಿತಿ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಅವರು ಚೈತನ್ಯ ಜೊತೆಗಿನ 2 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಈಗ ಮತ್ತೆ ಸಿನಿಮಾ, ನಟನೆ, ನಿರ್ಮಾಣ ಅಂತಾ ನಿಹಾರಿಕಾ ಕೆರಿಯರ್ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ಒಕ ಮನಸ್ಸು ಎಂಬ ಸಿನಿಮಾ ಮೂಲಕ ನಾಯಕಿಯಾಗಿ ನಿಹಾರಿಕಾ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಕಂಗನಾ ರಣಾವತ್ ಹಿಂದೆ ಬಿದ್ದಿದ್ದಾನಂತೆ ಹೆಣ್ಣುಬಾಕ ನಟ
‘ಸೂರ್ಯಕಾಂತಂ’ (Suryakantam) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ನಾಯಕಿಯಾಗಿ ಲೈಮ್‌ಲೈಟ್‌ನಲ್ಲಿ ಮಿಂಚಲು ನಿಹಾರಿಕಾ ಮನಸ್ಸು ಮಾಡಿದ್ದಾರಂತೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿರೋ ಮೆಗಾ ಕುಟುಂಬ ಕುಡಿ ಈಗ ಮತ್ತೆ ಹೀರೋಯಿನ್ ಆಗಿ ಮಿಂಚೋಕೆ ರೆಡಿಯಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರು ಯುವ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೆ ಕಥೆ ಸಿದ್ಧಗೊಂಡಿದ್ದರೂ ನಿಹಾರಿಕಾ ನಾಯಕಿಯಾಗಿ ಎಂಟ್ರಿ ಕೊಡಲು ಮೆಗಾ ಫ್ಯಾಮಿಲಿ ಒಪ್ಪುತ್ತಿಲ್ಲ ಎಂಬುದು ಒಳಗಿನ ಮಾತು. ಸಿನಿಮಾ ವಿಚಾರದಲ್ಲಿ ನಿಹಾರಿಕಾ ನಿರ್ಧಾರಕ್ಕೆ ಮೆಗಾ ಫ್ಯಾಮಿಲಿ ನೋ ಹೇಳುತ್ತಿದೆ. ಆದರೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾಗೆ ಬರುವುದು ಮೆಗಾ ಫ್ಯಾಮಿಲಿಗೆ ಇಷ್ಟವಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ನಟಿಯ ಕುಟುಂಬ ನೋ ಅಂದ್ರು ಕೂಡ ನಿಹಾರಿಕಾ ಈ ವಿಚಾರದಲ್ಲಿ ಸಖತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದೇ ತನ್ನದೇ ನಿರ್ಧಾರ ಅಂತಿಮ ಅಂತಾ ನಟಿ ಹಠ ಮಾಡ್ತಿದ್ದಾರೆ ಎಂದು ಗುಸು ಗುಸು ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ. ಇದು ನಿಜಾನಾ? ಅಥವಾ ಗಲ್ಲಿ ಗಾಸಿಪ್ ಅಂತಾ ನಟಿ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]