ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಬುಲೆಟ್ ರೈಲು ಯೋಜನೆ ಸೇರಿದಂತೆ ಎರಡು ದೇಶಗಳ ನಡುವೆ ನಡೆದ ಮಹತ್ವದ ಒಪ್ಪಂದಗಳಿಗೆ ಎರಡು ಭಾಷೆಗಳ ಸೇತುವೆಯಾಗಿ ಕೆಲಸ ಮಾಡಿದವರು ಕರ್ನಾಟಕದ ಮಣ್ಣಿನ ಮಗ ರಾಜೇಶ ನಾಯ್ಕ.
ರಾಜೇಶ ನಾಯ್ಕ ಭಾರತದ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಡೀ ವಿದೇಶಾಂಗ ಇಲಾಖೆಯಲ್ಲಿಯೇ ಜಪಾನಿ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡಬಲ್ಲ ವಿಶಿಷ್ಟತೆಯನ್ನು ಹೊಂದಿದ್ದಾರೆ. ಇವರಿಗೆ ಬುಲೆಟ್ ರೈಲು ಯೋಜನೆ, ಜಪಾನ್ ಪ್ರಧಾನಿ ಶಿಂಬೊ ಅಬೆ ಅವರ ಬಗ್ಗೆ ಹೇಳಿ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿ ದುಡಿದು, ಮಹತ್ವದ ಕಾರ್ಯವನ್ನು ರಾಜೇಶ ನಾಯ್ಕ ಯಶಸ್ವಿಗೊಳಿಸಿದ್ದಾರೆ.
Advertisement
ರಾಜೇಶ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು ವಕೀಲ ಎನ್.ಡಿ.ನಾಯ್ಕ ಐಸೂರು ಮತ್ತು ಲಕ್ಷ್ಮೀ ನಾಯ್ಕ ದಂಪತಿಯ ನಾಲ್ಕನೇ ಪುತ್ರ. 10 ನೇ ತರಗತಿ ಓದುತ್ತಿದ್ದಾಗಲೇ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು.
Advertisement
ಮೊದಲು ಕೆಎಎಸ್ ಪರೀಕ್ಷೆಯನ್ನು ಬರೆದು ಅದರಲ್ಲಿ 7ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದ ರಾಜೇಶ್ ಅವರು ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಕನಸಿನತ್ತಾ ಸಾಗಲು ಉತ್ಸುಕತೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2009 ರಲ್ಲಿ ಸಿಎಸ್‍ಇ ಬ್ಯಾಚ್‍ನಲ್ಲಿ 260 ನೇ ರ್ಯಾಂಕ್ ಪಡೆದು ವಿದೇಶಾಂಗ ಇಲಾಖೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement
Advertisement