ಪ್ರಾಣಿಗಳ ದಿನಕ್ಕೆ ಮುದ್ದಾದ ಪಪ್ಪಿಯನ್ನು ತಾಯಿಗೆ ಉಡುಗೊರೆ ನೀಡಿದ್ರು ರಾಹುಲ್

Public TV
1 Min Read
RAHUL GANDHI

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಕುಟುಂಬದ ಹೊಸ ಸದಸ್ಯನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರಿಗೆ (Sonia Gandhi) ನಾಯಿ ಮರಿ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಗೋವಾಕ್ಕೆ (Goa) ಪ್ರವಾಸಕ್ಕೆ ಹೋಗಿದ್ದ ರಾಹುಲ್ ಅವರು ಉತ್ತರ ಗೋವಾದ ಮಾಪುಸಾದಿಂದ ನಾಯಿ ಮರಿ ನೂರಿಯನ್ನು ದತ್ತು ಪಡೆದುಕೊಂಡಿದ್ದಾರೆ. ವಿಶ್ವ ಪ್ರಾಣಿಗಳ ದಿನದ ಪ್ರಯುಕ್ತ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಐಟಿ ಭರ್ಜರಿ ಬೇಟೆ- 60 ಕಡೆ ದಾಳಿ; 2,500 ಕೋಟಿ ಅಕ್ರಮ ಬಯಲಿಗೆ

ವೀಡಿಯೊ ಜೊತೆಗೆ ಅವರು, ನೀವೆಲ್ಲರೂ ನಮ್ಮ ಕುಟುಂಬದ ಹೊಸ ಮತ್ತು ಮುದ್ದಾದ ಸದಸ್ಯನನ್ನು ಭೇಟಿಯಾಗಬೇಕೆಂದು ನಾನು ಬಯಸುತ್ತೇನೆ. ನಾವು ಈ ನೂರಿಯನ್ನು ಗೋವಾದಿಂದ ತಂದಿದ್ದೇವೆ. ಈ ಮುದ್ದಾದ ಪ್ರಾಣಿಗಳಿಂದ ನಾವು ಕಲಿಯುವುದು ಬಹಳ ಇದೆ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, ರಾಹುಲ್ ನಾಯಕನಷ್ಟೇ ಅಲ್ಲ. ಮಾನವೀಯ ಗುಣ ಹೊಂದಿರುವ ವ್ಯಕ್ತಿಯೂ ಹೌದು ಎಂದಿದ್ದಾರೆ.

ಹೆನ್ರಿಕ್ ಝಿಮ್ಮರ್‍ಮ್ಯಾನ್ ಎಂಬ ಸಿನೊಲೊಜಿಸ್ಟ್, ಮೊದಲ ವಿಶ್ವ ಪ್ರಾಣಿಗಳ ದಿನವನ್ನು 1925ರ ಮಾರ್ಚ್ 24 ರಂದು ಜರ್ಮನಿಯ ಬರ್ಲಿನ್‍ನಲ್ಲಿ ಆಯೋಜಿಸಿದರು. ಬಳಿಕ ಪ್ರಾಣಿಗಳು ಮತ್ತು ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಹೆಸರುವಾಸಿಯಾದ ಸಂತ ಅಸ್ಸಿಸಿಯ ಸೇಂಟ್ ಫ್ರಾನ್ಸಿಸ್ ಅವರಿಗೆ ಗೌರವ ಸೂಚಿಸಲು ಅ.4ನ್ನು ಈ ಆಚರಣೆಗೆ ನಿಗದಿಪಡಿಸಲಾಯಿತು. ನಂತರದ ದಿನಗಳಲ್ಲಿ ಈ ಆಚರಣೆ ಜಾಗತಿಕ ಆಚರಣೆಯಾಗಿ ಬೆಳೆಯಿತು. ಇದನ್ನೂ ಓದಿ: ಇದು ಪ್ರಿ ಅರೇಂಜ್ ಮ್ಯಾರೇಜ್- ಬಿಜೆಪಿ ದೋಸ್ತಿಗೆ ಮತ್ತೆ ಸಿಎಂ ಇಬ್ರಾಹಿಂ ವಿರೋಧ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article