ಢಾಕಾ: ಟೀಂ ಇಂಡಿಯಾಗೆ (Team India) 250ನೇ ಏಕದಿನ ಆಟಗಾರನಾಗಿ ಮಧ್ಯಪ್ರದೇಶ (MP) ಮೂಲದ ವೇಗಿ ಕುಲ್‍ದೀಪ್ ಸೇನ್ (Kuldeep Sen) ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Advertisement
ಬಾಂಗ್ಲಾದೇಶ (Bangladesh) ವಿರುದ್ಧದ ಮೊದಲ ಏಕದಿನ ಪಂದ್ಯ ಕುಲ್‍ದೀಪ್ ಸೇನ್‍ಗೆ ಪದಾರ್ಪಣೆ ಪಂದ್ಯವಾಗಿದೆ. ಕುಲ್‍ದೀಪ್ ಸೇನ್ ಮೂಲತಃ ಮಧ್ಯಪ್ರದೇಶದ ಹರಿಹರಪುರದ ರೇವಾ ಜಿಲ್ಲೆಯವರು. ಇವರ ತಂದೆ ಕ್ಷೌರಿಕ (Barber). ಹೇರ್‌ಕಟ್ಟಿಂಗ್ ಶಾಪ್ ಹೊಂದಿದ್ದ ಕುಲ್‍ದೀಪ್ ಸೇನ್ ತಂದೆ ದುಡಿಮೆಯಿಂದ ಕುಟುಂಬ ನಡೆಸುತ್ತಿದ್ದರು. ಬಡತನದಿಂದಲೇ ಸಾಗುತ್ತಿದ್ದ ಕುಲ್‍ದೀಪ್ ಸೇನ್ ತಮ್ಮ 8ನೇ ವಯಸ್ಸಿನಲ್ಲಿರಬೇಕಾದರೆ, ಕ್ರಿಕೆಟ್ ಆಟ ಇಷ್ಟವಾಗಿ ಮನಸೋತಿದ್ದರು. ಇದನ್ನೂ ಓದಿ: ಏಕದಿನ ಸರಣಿಯಿಂದ ಪಂತ್‍ಗೆ ಗೇಟ್‌ಪಾಸ್ – ರಾಹುಲ್‍ಗೆ ಹೆಚ್ಚುವರಿ ಜವಾಬ್ದಾರಿ
Advertisement
Advertisement
ಆದರೆ ಮನೆಯ ಮರಿಸ್ಥಿತಿ ಕಂಡು ಅಭ್ಯಾಸಕ್ಕೆ ದುಡ್ಡು ಕೊಟ್ಟು ಹೋಗಲು ಸಾಧ್ಯವಾಗಿರಲಿಲ್ಲ. ಆದರೂ ಕುಲ್‍ದೀಪ್ ಸೇನ್ ಕ್ರಿಕೆಟ್ ಬಿಟ್ಟಿರಲಿಲ್ಲ. ಅಲ್ಲಿ ಇಲ್ಲಿ ಆಟವಾಡುತ್ತಿದ್ದರು. ಈ ವೇಳೆ ಉತ್ತಮ ಬೌಲಿಂಗ್ ಆಕ್ಷನ್ ಹೊಂದಿದ್ದ ಕುಲ್‍ದೀಪ್ ಸೇನ್ ಬಾಲ್ಯದ ಕೋಚ್ ಆ್ಯಂಟನಿ ಕಣ್ಣಿಗೆ ಬೀಳುತ್ತಾರೆ. ಆ್ಯಂಟನಿ ಕೋಚಿಂಗ್ ನಡೆಸಲು ಹಣ ಪಡೆಯುತ್ತಿದ್ದರೂ ಆದರೆ ಕುಲ್‍ದೀಪ್ ಸೇನ್ ಸ್ಥಿತಿ ಕಂಡು ಹಣ ಪಡೆಯದೇ ಅವರಿಗೆ ಕ್ರಿಕೆಟ್ ಕಿಟ್ ನೀಡಿ ಪ್ರೋತ್ಸಾಹಿಸಿದ್ದರು. ಆ ಬಳಿಕ ತಮ್ಮ ವೇಗದ ಕಡೆಗೆ ಗಮನ ಕೋಡುತ್ತ ಸಾಗಿದ್ದ ಈ ಹುಡುಗ ಬೆಂಕಿ ಎಸೆತಗಳಿಂದ ಎದುರಾಳಿಗಳಿಗೆ ಕಾಡ ತೊಡಗಿದರು.
Advertisement
2018ರಲ್ಲಿ ಮಧ್ಯಪ್ರದೇಶ ಪರ ರಣಜಿ ಟ್ರೋಫಿ ಪದಾರ್ಪಣೆ ಮಾಡಿದ ಕುಲ್‍ದೀಪ್ ಸೇನ್ ಕೇವಲ 8 ಪಂದ್ಯಗಳಿಂದ 25 ವಿಕೆಟ್ ಕಿತ್ತು ಮಿಂಚಿದ್ದರು. ಈ ಪ್ರದರ್ಶನ ಮುಂದೆ ಅವರನ್ನು ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಿತು. 2022ರ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ 2 ಲಕ್ಷ ರೂ. ನೀಡಿ ಖರೀದಿಸಿತ್ತು. ಆ ಬಳಿಕ ರಾಜಸ್ಥಾನ ಪರ ಕೂಡ ಕುಲ್‍ದೀಪ್ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ
Kuldeep ban gaya India. ???????? pic.twitter.com/e9PvSeRkaZ
— Rajasthan Royals (@rajasthanroyals) October 31, 2022
ಇದೀಗ ಟೀಂ ಇಂಡಿಯಾ ಸೇರ್ಪಡೆಗೊಂಡಿದ್ದು, ಗಂಟೆಗೆ 140 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಸೇನ್ ಟೀಂ ಇಂಡಿಯಾ ಪರ ಆಡುವ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.