ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಪುತ್ರ ನಾಗಚೈತನ್ಯ ಮತ್ತು ಶೋಭಿತಾ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಬೆನ್ನಲ್ಲೇ ನಾಗಾರ್ಜುನ ಸಹೋದರಿ ಪುತ್ರ ಸುಶಾಂತ್ ಮದುವೆಯ ಬಗ್ಗೆ ಹರಿದಾಡುತ್ತಿದೆ. ‘ಗುಂಟೂರು ಖಾರಂ’ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಜೊತೆ ಸುಶಾಂತ್ (Sushanth) ಮದುವೆ (Wedding) ಆಗಲಿದ್ದಾರೆ ಎನ್ನಲಾದ ಸುದ್ದಿಗೆ ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮೀನಾಕ್ಷಿ ಚೌಧರಿ ಮಾತನಾಡಿ, ಸುಶಾಂತ್ ಜೊತೆಗಿನ ಮದುವೆ ವಿಚಾರ ಅದು ವದಂತಿಯಷ್ಟೇ ಎಂದಿದ್ದಾರೆ. ನಾನು ಅವರೊಂದಿಗೆ ಮದುವೆಯಾಗುತ್ತಿಲ್ಲ. ಈ ವದಂತಿಗಳು ಹೇಗೆ ಬರುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದರು. ನಾನು ಸಿಂಗಲ್ ಆಗಿದ್ದೇನೆ, ಎಂಗೇಜ್ ಆಗೋದ್ದಕ್ಕೆ ರೆಡಿಯಿಲ್ಲ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ
2021ರಲ್ಲಿ ಸುಶಾಂತ್‌ಗೆ ನಾಯಕಿಯಾಗಿ ಮೀನಾಕ್ಷಿ ತೆಲುಗು ಸಿನಿಮಾವೊಂದರಲ್ಲಿ ನಟಿಸಿದರು. ಅಲ್ಲಿಂದ ಇವರಿಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ವದಂತಿ ಹಬ್ಬಿತ್ತು. ಅದಕ್ಕೀಗ ನಟಿಯ ಕಡೆಯಿಂದ ಉತ್ತರ ಸಿಕ್ಕಿದೆ. ಇದನ್ನೂ ಓದಿ:‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್
ಇನ್ನೂ ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್ ಬಾಬುಗೆ ಜೊತೆ ಮೀನಾಕ್ಷಿ ನಟಿಸಿದ್ದರು. ವಿಜಯ್ ದಳಪತಿ ನಟನೆಯ ಗೋಟ್ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದರು. ಇದೀಗ ವರುಣ್ ತೇಜ್ ನಟನೆಯ ಮಟ್ಕಾ, ವಿಶ್ವಕ್ ಸೇನ್ ಹೊಸ ಚಿತ್ರಕ್ಕೆ ಮೀನಾಕ್ಷಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಿದೆ.