– ಕೃತ್ಯಕ್ಕೆ ಮಂಗಳೂರು ಪಾಲಿಕೆ ಅಧಿಕಾರಿಗಳಿಂದಲೇ ಸಾಥ್
ಮಂಗಳೂರು: ಕೇರಳದ ಕೊಳಚೆ ತ್ಯಾಜ್ಯ ಮಂಗಳೂರಿಗೆ (Mangaluru) ತಂದು ಸುರಿಯಲಾಗುತ್ತಿದ್ದ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದ್ರೆ ಕೊಳಚೆ ತ್ಯಾಜ್ಯ ಮಾತ್ರ ಸುರಿಯುತ್ತಿರಲಿಲ್ಲ. ಬದಲಾಗಿ, ಬಯೋ ಮೆಡಿಕಲ್ ವೇಸ್ಟ್ (Medical Waste) ಸುರಿಯುತ್ತಿದ್ದರು ಎನ್ನುವ ಆತಂಕಕಾರಿ ಮಾಹಿತಿ ಬಯಲಾಗಿದೆ. ಹೀಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಪಾಲಿಕೆಯ ಸಭೆ ನಡೆಸಿ, ತಡೆಗಟ್ಟಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಕೇರಳದಿಂದ (Kerala) ಕೊಳಚೆ ತ್ಯಾಜ್ಯ ತಂದು ಮಂಗಳೂರಿನ ನದಿ, ಚರಂಡಿಗಳಿಗೆ ಸುರಿಯುತ್ತಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಆದ್ರೀಗ ಕೊಳೆಚೆ ತ್ಯಾಜ್ಯ ಮಾತ್ರವಲ್ಲ, ಬಯೋ ಮೆಡಿಕಲ್ ವೇಸ್ಟ್ ಕೂಡ ಸುರಿಯುತ್ತಿದ್ದರು ಎನ್ನುವ ಆತಂಕಕಾರಿ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಹರಿದ ಕಾರು – ಓರ್ವ ಸಾವು
ಹೌದು. ಅಕ್ರಮವಾಗಿ ಬಯೋ ಮೆಡಿಕಲ್ ವೇಸ್ಟ್ ಕೂಡ ತಂದು ಮಂಗಳೂರಿನ ಸಿಕ್ಕ ಸಿಕ್ಕ ಹಳ್ಳಕ್ಕೆ ಬೀಸಾಕಿ ಹೋಗುತ್ತಿದ್ದರು. ಇದರಿಂದ ಜಲಚರಗಳಿಗೆ ಹಾಗೂ ಜೀವ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಮಂಗಳೂರು ನಗರ ಪಾಲಿಕೆ ಸೇರಿದ ಎರಡು ಟ್ಯಾಂಕರ್‌ಗಳು ಕೃತ್ಯದಲ್ಲಿ ಭಾಗಿಯಾಗಿತ್ತು. ಪಾಲಿಕೆ ಅಧಿಕಾರಿಗಳು ಕೃತ್ಯದಲ್ಲಿ ಕೈಜೋಡಿಸಿದ್ರು ಅಂತ ಅಧಿಕಾರಿಗಳ ವಿರುದ್ಧ ಕೇಸ್ ಹಾಕಲಾಗಿದೆ.
ಈ ಬೆನ್ನಲ್ಲೇ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ
ಕೇರಳದಿಂದ ಈ ರೀತಿಯಲ್ಲಿ ಬಯೋ ಮೆಡಿಕಲ್ ವೇಸ್ಟ್ ಸುರಿಯುವ ವಿಚಾರ ಭಾರೀ ಆತಂಕಕಾರಿ.. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಲಿಕೆ ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ