ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದು ಪೊಲೀಸರು, ವೈದ್ಯರು, ನರ್ಸ್‍ಗಳಿಗೆ ನಾವು ಸಹಕರಿಸಬೇಕು ಎಂದು ಕಣ್ಣೀರಿಡುತ್ತಾ ಮನಮುಟ್ಟುವಂತೆ ಜನರಿಗೆ ಸಂದೇಶ ನೀಡಿದ್ದಾರೆ.
ವಿಡಿಯೋವೊಂದರ ಮೂಲಕ ಇಡೀ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಕಳೆದ 3 ದಿನದ ಹಿಂದೆ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ವ್ಯಕ್ತಿ ಪೊಲೀಸರು, ವೈದ್ಯರು, ನರ್ಸ್‍ಗಳ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನರಕದಿಂದ ನಮ್ಮನ್ನು ಹೊರ ಕರೆತರಲು ಅವರು ಬಹಳ ಕಷ್ಟಪಡುತ್ತಿದ್ದಾರೆ. ಈ ನರಕದಿಂದ ಹೊರಬರಲು ನಾವು ಅವರಿಗೆ ಸಹಕಾರ ಕೊಡಬೇಕು. ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ನಾವು ಈ ಕೊರೊನಾ ಹೋರಾಟದಲ್ಲಿ ಹೋರಾಡಲು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
Advertisement
Advertisement
ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಯನ್ನು ಸ್ಥಳೀಯರು ಯೋಧನ ರೀತಿ ಸ್ವಾಗತಿಸಿ ಬರಮಾಡಿಕೊಂಡರು. ತಬ್ಲಿಘಿ ಸಮಾವೇಶಕ್ಕೆ ತೆರಳಿ ಕೊರೊನಾ ಪಾಸಿಟಿವ್ ಆಗಿದ್ದ ತೊಕ್ಕೊಟ್ಟಿನ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವ್ಯಕ್ತಿ ಗುಣಮುಖರಾಗಿ ಮನೆಗೆ ಬರುತ್ತಿದ್ದಾಗ ಇವರನ್ನು ಸ್ವಾಗತಿಸಲು ಸೀಲ್‍ಡೌನ್ ಆದ ತೊಕ್ಕೊಟ್ಟು ಏರಿಯಾದಲ್ಲಿ 30ಕ್ಕೂ ಹೆಚ್ಚು ಮಂದಿ ಸೇರಿದ್ದರು. ಕೊರೊನಾ ಹರಡದಂತೆ ತೊಕ್ಕೊಟ್ಟಿನಲ್ಲಿ ಬಿಗುವಾದ ಲಾಕ್‍ಡೌನ್ ಮಾಡಲಾಗಿತ್ತು.
Advertisement
Advertisement
ಈ ವೇಳೆ ಮಾತನಾಡಿದ ವ್ಯಕ್ತಿ, ವೈದ್ಯರು ಮತ್ತು ನರ್ಸ್‍ಗಳು ಸೇವೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಪೊಲೀಸರು, ವೈದ್ಯರು ಮತ್ತು ನರ್ಸ್‍ಗಳು ನಮ್ಮನ್ನು ಕೊರೊನಾ ನರಕದಿಂದ ಪಾರು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಬೇಕು. ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಅವರಿಗೆ ಎಷ್ಟೆ ಕಷ್ಟವಾದರೂ ಜನರ ಜೀವ ಉಳಿಸಲು ವೈದ್ಯರು, ಪೊಲೀಸರು, ನರ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಣ್ಣಿರಿಡುತ್ತಲೇ ಗುಖಮುಖರಾದ ಸೋಂಕಿತ ಹೇಳಿಕೊಂಡಿದ್ದಾರೆ.
ಈ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು ಟ್ವೀಟ್ ಮಾಡಿದ್ದಾರೆ.