ಬೆಂಗಳೂರು: ಭದ್ರತೆಯ ನೆಪವೊಡ್ಡಿ ವಿಧಾನಸೌಧದಲ್ಲಿ (Vidhana Soudha) ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳಿಂದು ಮೌನ ಧರಣಿ ನಡೆಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ (Gandhi Statue) ಮುಂಭಾಗದಲ್ಲಿ ಕುಳಿತು ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ ಮೌನ ಧರಣಿ ನಡೆಸಿದರು. ಇದನ್ನೂ ಓದಿ: ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

ಅಲ್ಲದೇ ಮಾಧ್ಯಮ ಸ್ವಾತಂತ್ರ್ಯ ರಕ್ಷಿಸಲು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನ ಎತ್ತಿಹಿಡಿಯಲು ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ನಿರ್ಬಂಧಗಳನ್ನ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಸ್ಥಳಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ (KV Prabhakar) ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮುಖ್ಯಮಂತ್ರಿಗಳ ಗಮನಕ್ಕೆ ವಿಚಾರ ತರುವುದಾಗಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಭಂಧ ಏನು?
ಭದ್ರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಧ್ಯಮಗಳಿಗೆ ಹೊಸ ಲಕ್ಷ್ಮಣ ರೇಖೆ ಎಳೆದಿದೆ. ಮಾಧ್ಯಮಗಳಿಂದ ಭದ್ರತೆಗೆ ಸಮಸ್ಯೆ ಆಗ್ತಿದೆ ಅಂತ ಹೇಳಿ ಇನ್ನು ಮುಂದೆ ವಿಧಾನಸೌಧದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳ ಪ್ರತಿಕ್ರಿಯೆ ಪಡೆಯಬೇಕು ಅಂತ ನಿಯಮ ಮಾಡಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ – ಸರ್ಕಾರದ ಹೇಡಿತನಕ್ಕೆ ಸಾಕ್ಷಿ: ಜೆಡಿಎಸ್

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ವಾರ್ತಾ ಇಲಾಖೆಗೆ ಈ ಸಂಬಂಧ ಪತ್ರ ಬರೆದಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರೋ ಕೆಲಸಕ್ಕೆ ಸರ್ಕಾರವೇ ಮುಂದಾಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸಿಎಂ ಜೊತೆ ಚರ್ಚೆ: ಚಲುವರಾಯಸ್ವಾಮಿ
ಹೊಸ ನಿಯಮದ ಅನ್ವಯ ಸರ್ಕಾರವು ವಿಧಾನಸೌಧದಲ್ಲಿ ನಿರ್ದಿಷ್ಟವಾದ ಒಂದು ಅಥವಾ ಎರಡು ಸ್ಥಳಗಳನ್ನು ಮಾತ್ರ ‘ಮೀಡಿಯಾ ಪಾಯಿಂಟ್’ ಎಂದು ಗುರುತಿಸಲಿದೆ. ರಾಜಕೀಯ ನಾಯಕರು ಅಥವಾ ಸಚಿವರು ತಮಗೆ ಇಷ್ಟವಿದ್ದರೆ ಮಾತ್ರ ಆ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕಾಗುತ್ತದೆ.

