ಕನ್ನಡದ ಬ್ಯೂಟಿ ಶ್ರದ್ಧಾ ಶ್ರೀನಾಥ್ (Shraddha Srinath) ಸದ್ಯ ದಕ್ಷಿಣದ ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ಇದೀಗ ನಟಿ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ವಿಶ್ವಕ್ ಸೇನ್ ನಟನೆಯ ಹೊಸ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಶಿವಸೈನ್ಯಕ್ಕೆ ಗುಡ್ ನ್ಯೂಸ್- 131ನೇ ಚಿತ್ರದ ಶೂಟಿಂಗ್‌ಗೆ ಹೊರಡಲು ರೆಡಿಯಾದ್ರು ಶಿವಣ್ಣ
ಪ್ರತಿಭಾನ್ವಿತ ನಟಿ ಶ್ರದ್ಧಾ ಶ್ರೀನಾಥ್ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ವಿಶ್ವಕ್ ಸೇನ್ (Vishwak Sen) ನಟನೆಯ ‘ಮೆಕಾನಿಕ್ ರಾಕಿ’ (Mechanic Rocky) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ವಿಭಿನ್ನ ಪಾತ್ರ ಇದಾಗಿದೆ.
ಇನ್ನೂ ಈ ಸಿನಿಮಾದಲ್ಲಿ ವಿಶ್ವಕ್ ಸೇನ್ ಜೊತೆ ಶ್ರದ್ಧಾ ಶ್ರೀನಾಥ್, ಮೀನಾಕ್ಷಿ ಚೌಧರಿ, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಇದೇ ಅಕ್ಟೋಬರ್ 31ರಂದು ‘ಮೆಕಾನಿಕ್ ರಾಕಿ’ ಚಿತ್ರ ರಿಲೀಸ್ ಆಗಲಿದೆ.
ಅಂದಹಾಗೆ, ಕನ್ನಡದ ಆಪರೇಷನ್ ಅಲಮೇಲಮ್ಮ, ಯೂ ಟರ್ನ್, ರುಸ್ತುಂ, ಡಿಯರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.