ಮುಂಬೈ: ಈ ಹಿಂದೆ ಕ್ರಿಕೆಟ್‍ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಂಕಡ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಮಾರ್ಲೆಬೋನ್ ಕ್ರಿಕೆಟ್ ಸಂಸ್ಥೆ (ಎಂಸಿಸಿ) ತಂದಿರುವ ಹೊಸ ನಿಯಮದ ಪ್ರಕಾರ ಮಂಕಡ್‌ನ್ನು ರನ್ ಔಟ್ ಎಂದು ತೀರ್ಪು ನೀಡಲು ಸೂಚಿಸಿದೆ.
ಎಸಿಸಿಯ ಹೊಸ ನಿಯಮದ ಅನ್ವಯ ಇನ್ನು ಮುಂದೆ ಮಂಕಡ್ ಮಾಡಿ ಬೌಲರ್, ಬ್ಯಾಟ್ಸ್‌ಮ್ಯಾನ್‌ನ್ನು ಔಟ್ ಮಾಡಿದರೆ ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಸಲೈವಾ (ಎಂಜಲು) ಹಚ್ಚುವುದನ್ನು ಬ್ಯಾನ್ ಮಾಡಲಾಗಿದೆ. 2017ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ನಿಯಮಾವಳಿಗಳನ್ನು ಪರಿಚಯಿಸಿದ ನಂತರ ಹಲವು ಬಾರಿ ತಿದ್ದುಪಡಿಗಳನ್ನು ಮಾಡಲಾಗಿದೆ. ಇದೀಗ ಮತ್ತೆ ತಿದ್ದುಪಡಿ ಮಾಡಲಾಗಿದೆ. ಇದನ್ನೂ ಓದಿ: ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್ ಬದಲಾಗಿ ‘ಬ್ಯಾಟರ್’ ಪದ ಬಳಕೆ
ಎಂಸಿಸಿ ಕ್ರಿಕೆಟ್‍ನಲ್ಲಿ ಹೊಸ ನಿಯಮಗಳನ್ನು ಪರಿಚರಿಸುತ್ತದೆ ಆದರೆ ಈ ನಿಯಮಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚರ್ಚಿಸಿ ತಮಗೆ ಬೇಕಾದರೆ ಮಾತ್ರ ಜಾರಿಗೆ ತರುತ್ತದೆ.
ಮಂಕಾಡಿಂಗ್ ಔಟ್
ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನ್ ಔಟ್ ಎಂದೇ ಪರಿಗಣಿಸಲಾಗುವುದಾಗಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್
ಸಲೈವಾ ಬ್ಯಾನ್
ಕೊರೊನಾ ನಂತರ ಸಲೈವಾ ಹಚ್ಚುವುದನ್ನು ಬ್ಯಾನ್ ಮಾಡಲಾಗಿತ್ತು. ಉದ್ದೇಶಪೂರ್ವಕವಾಗಿ ಸಲೈವಾ ಹಚ್ಚಿದರೂ ಅದನ್ನು ಚೆಂಡನ್ನು ವಿರೂಪಗೊಳಿಸುವ ಯತ್ನ ಎಂದೇ ಕರೆಯಲಾಗುತ್ತದೆ ಎಸಿಸಿ ಹೊಸ ನಿಯಮದಲ್ಲಿ ತಿಳಿಸಿದೆ.
ಕ್ಯಾಚ್ ಔಟ್ ಆದರೆ ನಂತರ ಬರುವ ಬ್ಯಾಟ್ಸ್‌ಮ್ಯಾನ್‌ಗೆ ಕ್ರಿಸ್
ಬ್ಯಾಟ್ಸ್‌ಮ್ಯಾನ್ ಕ್ಯಾಚ್ ನೀಡಿ ಔಟ್ ಆದರೆ ನಂತರ ಬರುವ ಬ್ಯಾಟ್ಸ್‌ಮ್ಯಾನ್ ನಾನ್‍ಸ್ಟ್ರೈಕ್ ಪಡೆಯಬೇಕು. ಈ ಮೊದಲು ಅರ್ಧ ಪಿಚ್ ಕ್ರಾಸ್ ಮಾಡಿದ್ದರೆ ಸ್ಟ್ರೈಕ್ ಬದಲಾಗುತ್ತಿತ್ತು. ಹೊಸ ನಿಯಮದಲ್ಲಿ ಇದು ಬದಲಾಗಿದ್ದು, ಕ್ಯಾಚ್ ಔಟ್ ಆದರೆ ನಂತರ ಬರುವ ಬ್ಯಾಟ್ಸ್‌ಮ್ಯಾನ್‌ಗೆ ಕ್ರಿಸ್ ಸಿಗಲಿದೆ.
ಡೆಡ್ ಬಾಲ್:
ಪಂದ್ಯ ನಡೆಯುವಾಗ ಮೂರನೇ ವ್ಯಕ್ತಿಯಿಂದ, ಪ್ರಾಣಿಯಿಂದ, ಅಥವಾ ವಸ್ತುಗಳಿಂದ ಅಡಚಣೆಯಾದರೆ ಅದನ್ನು ಡೆಡ್ ಬಾಲ್ ಎಂದು ತೀರ್ಪುನೀಡುವಂತೆ ಎಸಿಸಿ ತಿಳಿಸಿದೆ. ಇದನ್ನೂ ಓದಿ: ಫಸ್ಟ್ ಅಂಡ್ ಫೈನಲ್ ವಾರ್ನಿಂಗ್- ಮಂಕಡ್ ಔಟ್ ಕುರಿತು ಅಶ್ವಿನ್ ಬಹಿರಂಗ ಎಚ್ಚರಿಕೆ
ಫೀಲ್ಡಿಂಗ್ ತಂಡದ ಕ್ರೀಡಾಸ್ಫೂರ್ತಿಗೆ ವಿರುದ್ಧ ನಡೆ:
ಫೀಲ್ಡಿಂಗ್ ತಂಡದ ಆಟಗಾರರು ಬೌಲಿಂಗ್ ಮಾಡುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧದ ನಡೆ ಎಸಗಿದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು. ಆದರೆ ಈ ಎಸೆತದಲ್ಲಿ ಬ್ಯಾಟ್ಸ್‌ಮ್ಯಾನ್ ರನ್ ಗಳಿಸಿದ್ದರೂ ಕೂಡ ಅದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಇದೀಗ ಈ ನಿಯಮಗಳನ್ನು ಬದಲಾಯಿಸಲಾಗಿದ್ದು, ತಂಡದ ಆಟಗಾರರು ಫೀಲ್ಡಿಂಗ್ ಮಾಡುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದರೆ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್ ಗಳನ್ನು ನೀಡಲು ಎಂಸಿಸಿ ಮುಂದಾಗಿದೆ.