ವಿಜಯಪುರ: 26 ವರ್ಷದ ವೈದ್ಯಕೀಯ ವಿದ್ಯಾರ್ಥಿ ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ವಿಜಯಪುರ (Vijayapura) ಜಿಲ್ಲೆಯ ಆಲಮೇಲ (Almel) ತಾಲೂಕಿನ ಕುಮಸಗಿ (Kumasagi) ಗ್ರಾಮದ ವೈಭವ ಕುಲಕರ್ಣಿ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಾಸನ| ಇಂದು ಒಂದೇ ದಿನ ಗೃಹಿಣಿ, ಪ್ರೊಫೆಸರ್, ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ
ಮೃತ ವೈಭವ ಬಾಗಲಕೋಟೆಯ (Bagalkote) ವಿವಿಎಸ್ ಮೆಡಿಕಲ್ ಕಾಲೇಜಿನಲ್ಲಿ (VVS Medical College) ಎಂಬಿಬಿಎಸ್ (MBBS) ಓದುತ್ತಿದ್ದ. ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವೈಭವ ತಮಿಳುನಾಡು (Tamilnadu) ಪ್ರವಾಸಕ್ಕೆಂದು ಹೋಗಿದ್ದ. ಪ್ರವಾಸದಿಂದ ವಾಪಸ್ ಬರುವಾಗ ಉಸಿರಾಟದ ತೊಂದರೆಯಾಗಿತ್ತು. ಹೀಗಾಗಿ ಆತನ ಗೆಳೆಯರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಸದ್ಯ ಸಂಬಂಧಿಕರು ಮೃತದೇಹವನ್ನು ಆಲಮೇಲ ತಾಲೂಕಿನ ಸ್ವಗ್ರಾಮ ಕುಮಸಗಿಗೆ ಕೊಂಡೊಯ್ಯುತ್ತಿದ್ದಾರೆ.ಇದನ್ನೂ ಓದಿ: ನಾನೂ ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ: ಪರಮೇಶ್ವರ್