– ಮಗ ಮೃತಪಟ್ಟ ಆಸ್ಪತ್ರೆಯಲ್ಲೇ ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿರೋ ತಾಯಿ
ಹಾಸನ: ಡೆಂಗ್ಯೂ ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ (MBBS Student) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ (Hassan Private Hospital) ನಡೆದಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತ ವಿದ್ಯಾರ್ಥಿ. ಕುಶಾಲ್ ಡೆಂಗ್ಯೂ ಮಹಾಮಾರಿಯಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ತಿಳಿದುಬಂದಿದೆ. ಇದನ್ನೂ ಓದಿ: PublicTV Explainer: ಬಜೆಟ್ ಎಂದರೇನು? ಆಯವ್ಯಯದ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ಒಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾನೆ. ಪ್ರತಿಭಾನ್ವಿತ, ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಭವಿಷ್ಯದಲ್ಲಿ ವೈದ್ಯನಾಗಿ ಜನಸೇವೆ ಮಾಡಬೇಕು ಎಂಬ ಹಂಬಲ ಇಟ್ಟುಕೊಂಡಿದ್ದ ಕುಶಾಲ್, ಕಿರಿಯ ವಯಸ್ಸಿನಲ್ಲಿಯೇ ಕಣ್ಮರೆಯಾಗಿರುವುದು ಪೋಷಕರಲ್ಲಿ ಅತೀವ ದುಃಖವನ್ನುಂಟುಮಾಡಿದೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭ – ಸಂಸದ ಬ್ರಿಜೇಶ್ ಚೌಟ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೆ ಇಲಾಖೆ
ವಿಪರ‍್ಯಾಸವೆಂದರೇ ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಸಹ ಡೆಂಗ್ಯೂ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದು, ತಂದೆ ಮಂಜುನಾಥ್ ಶಿಕ್ಷಕನಾಗಿದ್ದಾರೆ. ತಮ್ಮ ಇತಿಮಿತಿಯ ನಡುವೆಯೂ ಮಗ ಚೆನ್ನಾಗಿ ಓದಿ ವೈದ್ಯನಾಗಲಿ, ಆ ಮೂಲಕ ನೊಂದ ಜನರಿಗೆ ಸೇವೆ ಮಾಡಲಿ ಎಂಬುದು ತಂದೆ ಮಂಜುನಾಥ್ ಬಯಕೆಯಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ ಶ್ರಮ ತೆಗೆದುಕೊಂಡಿದ್ದರು. ಆದರೆ ತನ್ನ ಹಾಗೂ ಹೆತ್ತವರ ಆಸೆ ಈಡೇರುವ ಮುನ್ನವೇ ಕುಶಾಲ್ ಮಾರಣಾಂತಿಕ ಕಾಯಿಲೆ ಬಲಿಯಾಗಿದ್ದಾನೆ. ಇದನ್ನೂ ಓದಿ: ರಾಜ್ಯದ ಜಲಾಶಯಗಳಲ್ಲಿ 536 ಟಿಎಂಸಿ ನೀರು ಸಂಗ್ರಹ – ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ