ಮುಂಬೈ: ಮನೆ ಕೆಲಸದವಳಿಗಾಗಿ ಎಂಬಿಎ ಪದವಿ ಪಡೆದ ದಂಪತಿ ಪ್ರತಿದಿನ ಬೆಳಗ್ಗೆ ಮಹಾರಾಷ್ಟ್ರದ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಉಪಾಹಾರ ಮಾರುತ್ತಿದ್ದಾರೆ.
ಅಶ್ವಿನಿ ಶೆಣೈ ಶಾ ಮತ್ತು ಅವರ ಪತಿ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೂ ತಿಂಡಿ ಮಾರುತ್ತಾರೆ. ಅದಾದ ಬಳಿಕ ಇಬ್ಬರು ತಮ್ಮ-ತಮ್ಮ ಕೆಲಸಕ್ಕೆ ತೆರಳುತ್ತಾರೆ. ದಂಪತಿ ರೈಲ್ವೆ ನಿಲ್ದಾಣದ ಹೊರಗೆ ರಸ್ತೆಬದಿ ತಿಂಡಿ ಮಾರುತ್ತಿರುವ ಕಾರಣ ಕೇಳಿದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೀಪಾಲಿ ಭಾಟೀಯಾ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಅಶ್ವಿನಿ ಶೆಣೈ ಹಾಗೂ ಅವರ ಪತಿಯ ಕತೆಯನ್ನು ಹಂಚಿಕೊಂಡರು. ಅಲ್ಲದೆ ಅವರಿಗೆ “ಸೂಪರ್ ಹೀರೋ” ಎಂದು ಹೊಗಳಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಗಾಂಧಿ ಜಯಂತಿ ದಿನದಂದು ಬೆಳಗ್ಗೆ ನಾನು ತಿಂಡಿಗಾಗಿ ಹುಡುಕಾಡುತ್ತಿದ್ದೆ. ಈ ವೇಳೆ ಇಬ್ಬರು ಅವಲಕ್ಕಿ, ಉಪ್ಪಿಟ್ಟು, ಪರೋಟ ಹಾಗೂ ಇಡ್ಲಿ ಮಾರುತ್ತಿರುವುದನ್ನು ನೋಡಿದೆ. ಆಗ ಅವರಿಗೆ ರಸ್ತೆಬದಿಯಲ್ಲಿ ಏಕೆ ಉಪಾಹಾರ ಮಾರುತ್ತಿದ್ದೀರಾ ಎಂದು ಪ್ರಶ್ನಿಸಿದೆ. ಆಗ ಅವರ ಉತ್ತರ ಕೇಳಿ ನನಗೆ ತುಂಬಾ ಖುಷಿ ಆಯಿತು.
Advertisement
ಅಶ್ವಿನಿ ಹಾಗೂ ಅವರ ಪತಿ ಕೆಲಸಕ್ಕೆ ಹೋಗುವ ಮೊದಲು ಬೆಳಗ್ಗೆ ಬೇಗ ಎದ್ದು ತಮ್ಮ ಮನೆ ಕೆಲಸದವಳು ಮಾಡಿದ ಅಡುಗೆಯನ್ನು ರಸ್ತೆ ಬದಿಯಲ್ಲಿ ಮಾರುತ್ತಾರೆ. 55 ವರ್ಷದ ಮನೆ ಕೆಲಸದವಳ ಪತಿ ಪಾರ್ಶ್ವವಾಯುಗೆ ಒಳಗಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ಹಣಕ್ಕಾಗಿ ಪರದಾಡುವುದು ಬೇಡ ಎಂದು ಆಕೆ ತಯಾರಿಸಿದ ಅಡುಗೆಯನ್ನು ರಸ್ತೆಬದಿಯಲ್ಲಿ ದಂಪತಿ ಮಾರುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
ದೀಪಾಲಿ ಅವರು ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ಇದು ವೈರಲ್ ಆಗಿದೆ. ಅಲ್ಲದೆ ಈವರೆಗೂ ಈ ಪೋಸ್ಟ್ ಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 4 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಮತ್ತೆ ಕೆಲವರು ದಂಪತಿಯ ಕಾರ್ಯಕ್ಕೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.