ಬೆಂಗಳೂರು: ಎಕ್ಸಿಟ್ ಪೋಲ್ (Exit Poll) ಸಮೀಕ್ಷೆಗಳ ಮೇಲೆ ನಮಗೆ ನಂಬಿಕೆಯಿಲ್ಲ. ಈ ಬಾರಿ ಬಿಜೆಪಿ ತನ್ನ ಸ್ವಂತ ಬಲದಿಂದ 275 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಸಮೀಕ್ಷೆ ನಂಬಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ (Congress) ಅನ್ನೋ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ. ಆದ್ರೆ ವಾಸ್ತವಾಂಶವೇ ಬೇರೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Exit Polls: ಕರ್ನಾಟಕದಲ್ಲಿ 20 ರ ಗಡಿ ದಾಟಿದ ಬಿಜೆಪಿ – ಕಾಂಗ್ರೆಸ್‌ಗೆ ಎಷ್ಟು?
2019ರ ಚುನಾವಣೆಯಲ್ಲಿ ಪುಲ್ವಾಮಾ ದಾಳಿ, ಬಾಲಾಕೋಟ್ ಏರ್‌ಸ್ಟ್ರೈಕ್ ಇವೆಲ್ಲವೂ ರಾಷ್ಟ್ರೀಯತೆಯ ಭಾವನೆ ಬಿತ್ತಿತ್ತು. ದೇಶಕ್ಕೆ ಗಂಡಾಂತರ ಬರಬಾರದು ಅನ್ನೋ ಕಾರಣಕ್ಕೆ ಎಲ್ಲರೂ ಬಿಜೆಪಿ ಪರವಾಗಿದ್ದರು. ಆದ್ದರಿಂದ ಬಿಜೆಪಿ ಗೆದ್ದಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Exit Polls | ಮೋದಿ ಹ್ಯಾಟ್ರಿಕ್ – 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್‌ಡಿಎ
2024ರ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ, ಆರ್‌ಎಸ್‌ಎಸ್ ಕೂಡ ಅಷ್ಟೊಂದು ದೊಡ್ಡಮಟ್ಟದ ಪ್ರಚಾರ ಮಾಡಿಲ್ಲ. ಎನ್‌ಆರ್‌ಐ ಸಮುದಾಯಗಳೂ ಸಹ ಮೋದಿ ಪರವಾಗಿ ಅಷ್ಟೊಂದು ಪ್ರಚಾರ ಮಾಡಿಲ್ಲ. ಬಿಜೆಪಿ ಕಳೆದ ಬಾರಿ 303 ಸ್ಥಾನಗಳನ್ನ ಪಡೆದುಕೊಂಡಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ 15 ರಿಂದ 20 ಸ್ಥಾನಗಳು, ಕರ್ನಾಟಕದಲ್ಲಿ 13 ಸ್ಥಾನ ಕಳೆದುಕೊಳ್ತಾರೆ. ಮಹಾರಾಷ್ಟ್ರದಲ್ಲಿ 15 ಸ್ಥಾನಗಳು ಸೇರಿ 60-70 ಸ್ಥಾನಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಬಿಜೆಪಿ ಗೆಲ್ಲುವುದು ಹೇಗೆ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸ್ವಂತ ಬಲದಿಂದ 275 ಸ್ಥಾನಗಳನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಈ ಬಾರಿ ಇಂಡಿಯಾ ಕೂಟದ ಪರವಾಗಿ ಅಲೆ ಇದೆ ಎಂದು ಎಂಬಿಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exit Poll 2024 | ದ್ರಾವಿಡರ ನಾಡಿನಲ್ಲಿ ಕಮಲೋತ್ಪತ್ತಿ – ಬಿಜೆಪಿಯಿಂದ ಐತಿಹಾಸಿಕ ಸಾಧನೆ!