-ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಅಂದಿದ್ದ ಪಾಟೀಲ್ರು ಸಚಿವರಾಗ್ತಾರಾ?
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೊದಲೇ ಮಂತ್ರಿಯಾಗಬೇಕಿತ್ತು. ಮಂತ್ರಿಯಾಗುವ ಎಲ್ಲ ಅರ್ಹತೆಗಳು ನಾನು ಹೊಂದಿದ್ದೇನೆ. ಈಗ ಉತ್ತರ ಕರ್ನಾಟಕಕ್ಕೆ 5 ಸಚಿವ ಸ್ಥಾನ ನೀಡಿದ್ದರಿಂದ ಸ್ವಲ್ಪ ನ್ಯಾಯ ಸಿಕ್ಕಿದೆ ಎಂದು ಸಂಭಾವ್ಯ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಎಂಬಿ ಪಾಟೀಲ್, ಯಾವುದೋ ಒಂದು ಕಾರಣಕ್ಕಾಗಿ ನನ್ನ ಹೆಸರು ಸಂಪುಟ ರಚನೆಯಲ್ಲಿ ಬಿಟ್ಟುಹೋಗಿತ್ತು. ಆದ್ದರಿಂದ ನನಗೆ ಆಗ ಅಸಮಾಧಾನವಿತ್ತು. ಆದರೆ ನಾನು ಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಕಾರಣ ಮತ್ತೆ ಆ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ಹೈಕಮಾಂಡ್ ಈಗ ಸಚಿವರಾಗಿ ಮಾಡಿದೆ. ಆದರೆ ಸಚಿವ ಸ್ಥಾನ ಸಿಗದಿದ್ದಾಗಲೂ ನಾನು ಕುಗ್ಗಿಲ್ಲ, ಏಕೆಂದರೆ 5 ವರ್ಷ ನೀರಾವರಿ ಸಚಿವನಾಗಿ ಪ್ರಮುಖ ಕಾರ್ಯವನ್ನು ಮಾಡಿದ್ದೆ. ರಾಜ್ಯದ ಜನರು ಈಗಲೂ ಆ ಕಾರ್ಯವನ್ನು ಮೆಚ್ಚುತ್ತಾರೆ. ಆದರೆ ಸಚಿವ ಸ್ಥಾನ ನೀಡಿದ ಬಗ್ಗೆ ಸದ್ಯ ನಾನು ಮಾತನಾಡಲು ಹೋಗಲ್ಲ. ಸಂಪುಟ ವಿಸ್ತರಣೆಯಲ್ಲಿ 5 ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ನೀಡಿ ತಾರತಮ್ಯವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ ಎಂದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ನನಗೆ ಆತ್ಮೀಯ ಸ್ನೇಹಿತ, ಅವರು ನಮ್ಮ ಜೊತೆಗೆ ಇರುತ್ತಾರೆ. ಅವರೊಂದಿಗೆ ಮಾತನಾಡುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರು 6 ತಿಂಗಳಿನಿಂದ ಕನಸು ಕಾಣುತ್ತಿದ್ದಾರೆ. ಆದರೆ ಅದು ನಡೆಯಲು ಸಾಧ್ಯವಿಲ್ಲ ಎಂದರು. ಕಳೆದ ಬಾರಿ ಸಚಿವ ಸ್ಥಾನ ಸಿಗದಿದ್ದಕ್ಕೆ ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ನಾನು ಅಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆಗೆ ನೀಡಲು ಎಂ.ಬಿ ಪಾಟೀಲ್ ನಿರಾಕರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv