ಬೆಂಗಳೂರು: ನಗರ ಅಥವಾ ಬೆಂಗಳೂರು ಸುತ್ತಮುತ್ತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣ ಮಾಡಲಾಗುತ್ತದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ (MB Patil) ಉತ್ತರ ನೀಡಿದರು.
Advertisement
ತುಮಕೂರು ಹಾಗೂ ಚಿತ್ರದುರ್ಗದ ಮಧ್ಯೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಬೆಂಗಳೂರಿನಲ್ಲಿ (Bengaluru) 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಪ್ರಸ್ತಾಪ ಇದೆ. ಈಗಾಗಲೇ ಏರ್‌ಪೋರ್ಟ್ ನಿರ್ಮಾಣಕ್ಕೆ 7-8 ಸ್ಥಳಗಳನ್ನ ಗುರುತಿಸಲಾಗಿದೆ. ಈಗ ಇರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಕೂಲ ಅಗುವಂತೆ ಹಾಗೂ ರಾಜ್ಯದ ಜನರಿಗೆ ಅನುಕೂಲ ಆಗುವಂತೆ ಹೊಸ ಏರ್‌ಪೋರ್ಟ್ (Airport) ನಿರ್ಮಾಣ ಮಾಡ್ತೀವಿ. ಬೆಂಗಳೂರಿನ 50-60 ಕಿಲೋಮೀಟರ್ ಸುತ್ತಮುತ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದೆ ಅಂತ ತಿಳಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ
Advertisement
Advertisement
7-8 ಲೊಕೇಶನ್ ಗಳಲ್ಲಿ ಮೆರಿಟ್ ಆಧಾರದಲ್ಲಿ ಜಾಗ ಫೈನಲ್ ಮಾಡಿ ಏರ್‌ಪೋರ್ಟ್ ಮಾಡ್ತೀವಿ. ತುಮಕೂರು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಏರ್‌ಪೋರ್ಟ್ ಮಾಡೊಕೆ ಒತ್ತಡ ಬರ್ತಿದೆ. ಬೆಂಗಳೂರು ಮತ್ತು ರಾಜ್ಯಕ್ಕೆ ಅನುಕೂಲ ಆಗೋ ರೀತಿ ಜಾಗದ ಬಗ್ಗೆ ನಿರ್ಧಾರ ನಾವು ತೆಗೆದುಕೊಳ್ಳಬೇಕು. ಈಗ ಇರುವ ಏರ್‌ಪೋರ್ಟ್ 2035ರ ವೇಳೆಗೆ ತನ್ನ ಸಾಮರ್ಥ್ಯದ ಪೀಕ್‌ಗೆ ಹೋಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್
Advertisement
ಅಷ್ಟರಲ್ಲಿ ಹೊಸ ವಿಮಾನ ನಿಲ್ದಾಣ ಮಾಡುವ ಪ್ಲ್ಯಾನ್ ನಾವು ಮಾಡಿಕೊಳ್ಳಬೇಕು. ಹೊಸ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣ ಪ್ರಾರಂಭ ಮಾಡುವ ಬಗ್ಗೆ ಪ್ರಕ್ರಿಯೆ ಶುರು ಮಾಡಲಾಗಿದೆ. ಏರ್‌ಪೋರ್ಟ್ ನಿರ್ಮಾಣ ಮಾಡುವ ಏಜೆನ್ಸಿ (ಹೈಡಕ್) ಜೊತೆಗೂ ಚರ್ಚೆ ಆಗಿದೆ. ಎಲ್ಲಿ ಮಾಡಬೇಕು ಅಂತ ಮೆರಿಟ್ ಆಧಾರದಲ್ಲಿ ಚರ್ಚೆ ನಡೆಸಿ, ಕೇಂದ್ರದ ಜೊತೆಗೂ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Scam | ಕೋಟ್ಯಂತರ ರೂ. ಬೆಲೆ ಬಾಳುವ ಐಷಾರಾಮಿ ಕಾರು ವಶಕ್ಕೆ