ಬೆಂಗಳೂರು: ನಗರದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅತಿ ಹೆಚ್ಚು ಸಭೆ ನಡೆಸುವ ಮೂಲಕ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಮೇಯರ್ ಸಂಪತ್ ರಾಜ್ ಬಿಬಿಎಂಪಿಯಲ್ಲಿ ಅತೀ ಹೆಚ್ಚು ಕೌನ್ಸಿಲ್ ಸಭೆ ನಡೆಸಿದ ದಾಖಲೆ ನಿರ್ಮಿಸಲು ಮುಂದಾಗಿದ್ದು, ಸಭೆಗಳ ಮೇಲೆ ಸಭೆಗಳನ್ನು ಮೇಯರ್ ಮಾಡುತ್ತಿದ್ದಾರೆ. ಆದರೆ ರೆಕಾರ್ಡ್ ಬ್ರೇಕ್ ಮಾಡುವುದಕ್ಕೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ.
Advertisement
ಮೇಯರ್ ಸಂಪತ್ ರಾಜ್ ಇದುವರೆಗೂ 31 ಸಭೆಗಳನ್ನು ನಡೆಸಿದ್ದಾರೆ. 31 ಸಭೆಗಳನ್ನು ನಡೆಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. 31 ಸಭೆಗಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ವೆಚ್ಚವಾಗಿದೆ. 31 ಸಭೆ ನಡೆಸಿದ್ದರು ಚರ್ಚೆ ನಡೆದಿದ್ದು, ಕೇವಲ 76 ಗಂಟೆಗಳು ಮಾತ್ರವಾಗಿದೆ.
Advertisement
198 ಚುನಾಯಿತ ಸದಸ್ಯರು ಹಾಗೂ 20 ನಾಮನಿರ್ದೇಶಿತ ಸದಸ್ಯರಿಗೆ ಭತ್ಯೆ ಕೊಡಲಾಗುತ್ತದೆ. ಕೌನ್ಸಿಲ್ ಸಭೆಗೆ ಹಾಜರಾಗುವ ಸದಸ್ಯರಿಗೆ ಒಂದು ದಿನಕ್ಕೆ 400 ರೂ. ಭತ್ಯೆ ನೀಡಲಾಗುತ್ತದೆ. ಜೊತೆಗೆ ಊಟ, ಉಪಹಾರ, ಇನ್ನಿತರ ವೆಚ್ಚ ಸೇರಿ ಒಂದು ದಿನದ ಸಭೆಗೆ ಅಂದಾಜು 8 ಲಕ್ಷ ರೂ. ಖರ್ಚಾಗುತ್ತದೆ. ಆದ್ದರಿಂದ ಸಂಪತ್ ರಾಜ್ ಅವಧಿಯಲ್ಲಿ ಸಭೆಗಾಗಿಯೇ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಮೇಯರ್ ಅವಧಿ ಎರಡು ತಿಂಗಳು ಇದೆ. ಆದ್ದರಿಂದ ಮೇಯರ್ ಗೆ ಎರಡರಿಂದ ಮೂರು ಸಭೆ ನಡೆಸುವ ಅವಕಾಶ ಕೂಡ ಇದೆ.
Advertisement