ಬೆಂಗಳೂರು: ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸಿಎಂ ಸಿದ್ದರಾಮಯ್ಯರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ್ದಾರೆ.
ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ 415 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ರು. ವಸತಿ ಸಚಿವ ಎಂ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮೇಯರ್ ಸಂಪತ್ ರಾಜು ಸೇರಿದಂತೆ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
Advertisement
ಈ ವೇಳೆ ಮಾತನಾಡಿದ ಮೇಯರ್, ಸಚಿನ್ ಕ್ರೀಡೆಯಲ್ಲಿ ಎಲ್ಲಾ ಸಾಧನೆ ಮಾಡಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿದ್ದರಾಮಯ್ಯರು ಕೂಡಾ ಎಲ್ಲಾ ಅಭಿವೃದ್ಧಿ ಕೆಲಸ ಮಾಡಿ ಇತಿಹಾಸ ಸೃಷ್ಟಿ ಮಾಡಿದ್ದಾರೆ ಅಂದ್ರು.
Advertisement
Advertisement
ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಗುಣಗಾನ ಮಾಡಿದ ಅವರು, ಹೊಗಳಿಕೆಯ ಭರಾಟೆಯಲ್ಲಿ ಸಿಎಂಗೆ ಮಾಡಿದ ಕೆಲಸ ಮರೆತು ಹೋಗಿದೆ. ತೆಂಡೂಲ್ಕರ್‍ಗೆ ತಮ್ಮ ದಾಖಲೆಗಳು ನೆನಪಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಹಾಗೆಯೇ. ಅವರಿಗೆ ಏನೇನು ಕೆಲಸ ಮಾಡಿದ್ದೇನೆ ಎಂಬುದು ನೆನಪಿಲ್ಲ. ಅಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದ್ರು.
Advertisement
ನಾನು ಮಹಾಪೌರರಾದಾಗ ಸಿಎಂ ಕೊಟ್ಟ ಆದೇಶದಂತೆ ದಿನಕ್ಕೆ ಹದಿನಾರು ಗಂಟೆ ಕೆಲಸ ಮಾಡುತ್ತಿದ್ದೇನೆ. ಡಿಸೆಂಬರ್-ಜನವರಿ ವೇಳೆಗೆ ಬೆಂಗಳೂರಿನಲ್ಲಿ ಏಳು ಸಾವಿರ ಕೋಟಿ ರೂ ಅಂದಾಜು ವೆಚ್ಚದ ಕಾಮಗಾರಿಗಳು ಉದ್ಘಾಟನೆಗೆ ಸಿದ್ದವಾಗಲಿವೆ ಅಂತ ಹೇಳಿದ್ರು.
ಬ್ಲೂ ಫಿಲಂ ಅಂದ್ರೆ ಏನ್ ಗೊತ್ತಾ?- ನೀಲಿ ಚಿತ್ರದ ಪಾಠ ಮಾಡಿದ ಸಿಎಂ https://t.co/jgIc3JnpFJ #Siddaramaiah #BlueFilm #Video pic.twitter.com/8nkF4abArK
— PublicTV (@publictvnews) November 11, 2017