Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

Public TV
2 Min Read
Sumeet Sabharwal Clive Kundar

– ‘ವಿಮಾನ ಮೇಲಕ್ಕೆ ಏರುತ್ತಿಲ್ಲ..’; ಕೊನೆ 5 ಸೆಕೆಂಡ್‌ಗಳ ಆಡಿಯೋ

ಗಾಂಧೀನಗರ: ಅಹಮದಾಬಾದ್‌ನಲ್ಲಿ ವಿಮಾನ ದುರಂತದ (Ahmedabad Plane Crash) ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ (Sumeet Sabharwal) ಅವರು ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ ಆಡಿಯೋ ಸಿಕ್ಕಿದೆ.

‘ಮೇಡೇ… ಒತ್ತಡವಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ, ಮೇಲೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಭರ್ವಾಲ್ ಅವರು ಎಟಿಸಿಗೆ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ, ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

Air India Bird Hit Ahmedabad Plane Crash

ವಿಮಾನವು 625 ಅಡಿ ಎತ್ತರವನ್ನು ತಲುಪಿದ ಸ್ವಲ್ಪ ಸಮಯದ ನಂತರ ನಿಮಿಷಕ್ಕೆ -475 ಅಡಿ ವೇಗದಲ್ಲಿ ಹಠಾತ್ ಇಳಿಯಲು ಪ್ರಾರಂಭಿಸಿತು. ತಕ್ಷಣವೇ ಪೈಲಟ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ‘ಮೇಡೇ’ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಎಟಿಸಿ ಮಾಡಿದ ಎಲ್ಲಾ ಕರೆಗಳಿಗೆ ಪೈಟಲ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಮೇಡೇ ಎಂದರೆ ವಿಮಾನ ತುಂಬಾ ಡೇಂಜರ್‌ನಲ್ಲಿದೆ ಎಂದರ್ಥ. ಜೀವಕ್ಕೆ ಅಪಾಯವಿದೆ ಎಂದು ತುರ್ತು ಪರಿಸ್ಥಿತಿಯನ್ನು ಸೂಚಿಸಲು ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಬಳಸಲಾಗುವ ಅತ್ಯುನ್ನತ ಮಟ್ಟದ ರೇಡಿಯೋ ಸಂಕೇತವಾಗಿದೆ. ಇದು ತಕ್ಷಣದ ಸಹಾಯದ ಅಗತ್ಯವಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

‘ಮೇಡೇ’ ಎಂಬ ಪದವು ಫ್ರೆಂಚ್ ಪದ ‘ಮೈಡರ್’ನಿಂದ ಬಂದಿದೆ. ‘ನನಗೆ ಸಹಾಯ ಮಾಡಿ’ ಎಂಬುದು ಇದರ ಅರ್ಥ. ತುರ್ತು ಸಂದರ್ಭಗಳಲ್ಲಿ ಸ್ಪಷ್ಟ ಸಂವಹನ ಖಚಿತಪಡಿಸಿಕೊಳ್ಳಲು ಲಂಡನ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದಲ್ಲಿ ರೇಡಿಯೋ ಅಧಿಕಾರಿಯಾಗಿದ್ದ ಫ್ರೆಡೆರಿಕ್ ಸ್ಟಾನ್ಲಿ ಮಾಕ್‌ಫೋರ್ಡ್ 1920 ರ ದಶಕದ ಆರಂಭದಲ್ಲಿ ಇದನ್ನು ಪರಿಚಯಿಸಿದರು. ನಂತರ ಈ ಪದವು ಪೈಲಟ್‌ಗಳು ಮತ್ತು ನಾವಿಕರಿಗೆ ಅಂತರರಾಷ್ಟ್ರೀಯ ರೇಡಿಯೋ ಸಂವಹನದ ಪ್ರಮಾಣಿತ ಭಾಗವಾಯಿತು. 1927 ರಲ್ಲಿ ಮೋರ್ಸ್ ಕೋಡ್ ಸಿಗ್ನಲ್ “SOS” ಜೊತೆಗೆ ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು.

Share This Article