ರಾಯಚೂರು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಯಿಂದ ಏನು ಆಗಲ್ಲ. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ರಾಜ್ಯದಲ್ಲಿಯೇ ಏನು ಮಾಡಿಲ್ಲ, ಇಲ್ಲೇನು ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಶಾಸಕರ ಮಗನಾದರೇನು ಯಾರಾದರೇನು ತಪ್ಪು ತಪ್ಪೇ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ ಅಂತ ಹೇಳಿದ್ದಾರೆ.
Advertisement
Advertisement
ತಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸುತ್ತಾರೆ. ಅವರು ನಮ್ಮಂತೆ ಜನರ ಕೈಗೆ ಸಿಗುವುದಿಲ್ಲ. ನರೇಂದ್ರ ಮೋದಿ ಬ್ಯಾಂಕ್ ನಲ್ಲಿ ಹಣ ಇಡಿ ಅಂತಾರೆ. ಹಣ ಹೂಡಿಕೆ ಮಾಡಿದ್ರೆ ನೀರವ್ ಮೋದಿ ಲೂಟಿ ಮಾಡ್ತಾರೆ. ಪ್ರಧಾನಿ ಮೋದಿ ಇದರ ಬಗ್ಗೆ ಎಲ್ಲೂ ಮಾತಾಡಿಲ್ಲ ಕೂಡಲೇ ಮಾತಾಡಬೇಕು ಎಂದು ಸಿಎಂ ಆಗ್ರಹಿಸಿದ್ರು. ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿಗೂ ನೀರವ್ ಮೋದಿಗೂ ಸಂಬಂಧ ಇಲ್ಲ. ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿಂಘ್ವಿ ಮುಂದಾಗಿದ್ದಾರೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯ ಮಾಡಿದೆ: ಮಯಾವತಿ
Advertisement
ಹೆಲಿಪ್ಯಾಡ್ ನಲ್ಲಿ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್ ಸಿದ್ದರಾಮಯ್ಯರ ಕಾಲಿಗೆ ನಮಸ್ಕರಿಸುವ ಮೂಲಕ ಸ್ವಾಗತ ಕೋರಿದರು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 540 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.