– ಮಂಡ್ಯದಲ್ಲೇ 8 ಜನರಿಗೆ ಪಾಸಿಟಿವ್
– ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ಕೋವಿಡ್-19 ವಲಯಗಳ ಪರಷ್ಕೃತ ಪಟ್ಟಿಯಲ್ಲಿ ಕಿತ್ತಳೆ ವಲಯದಲ್ಲಿರುವ ಮಂಡ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಇಂದು ಒಂದೇ ದಿನ ಜಿಲ್ಲೆಯ 8 ಜನರಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಕೊರೊನಾ ತಗುಲಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಕೊರೊನಾ ಆತಂಕ ಮತ್ತಷ್ಟು ಹೆಚ್ಚಳ- ಬಿ. ಕೊಡಗಹಳ್ಳಿ ಸೀಲ್‍ಡೌನ್
Advertisement
Advertisement
ಇತ್ತ ಬೆಳಗಾವಿಯಲ್ಲೂ ಓರ್ವ ಸೋಂಕಿತನಿಂದ ಮೂವರಿಗೆ ಕೊರೊನಾ ತಗುಲಿದ್ದು, ಬೆಳಗಾವಿಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈವರೆಗೂ ಹೆಮ್ಮಾರಿ ಕೊರೊನಾ ವೈರಸ್‍ಗೆ ರಾಜ್ಯದ 22 ಜನರು ಬಲಿಯಾಗಿದ್ದು, 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಸೋಂಕಿತರ ವಿವರ:
ರೋಗಿ-566: ಮಂಡ್ಯದ 25 ವರ್ಷದ ಪುರಷ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.
ರೋಗಿ-567: ಮಂಡ್ಯದ 24 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.
ರೋಗಿ-568: ಮಂಡ್ಯದ 27 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.
ರೋಗಿ-569: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ 30 ವರ್ಷದ ಮಹಿಳೆ. ರೋಗಿ-566, 567 ಹಾಗೂ 588ರ ಸಂಪರ್ಕದಲ್ಲಿದ್ದರು.
Advertisement
ರೋಗಿ-570: ಮಂಡ್ಯ ಜಿಲ್ಲೆ ಮಳವಳ್ಳಿಯ 19 ವರ್ಷದ ಪುರುಷ. ರೋಗಿ-179ರ ಸಂಪರ್ಕ ಹೊಂದಿದ್ದರು.
ರೋಗಿ-571: ಮಂಡ್ಯ ಜಿಲ್ಲೆ ಮಳವಳ್ಳಿಯ 32 ವರ್ಷದ ಮಹಿಳೆ. ರೋಗಿ-179ರ ಸಂಪರ್ಕ ಹೊಂದಿದ್ದರು.
ರೋಗಿ-572: ಮಂಡ್ಯ ಜಿಲ್ಲೆ ಮಳವಳ್ಳಿಯ 13 ವರ್ಷದ ಬಾಲಕ. ರೋಗಿ-179ರ ಸಂಪರ್ಕ ಹೊಂದಿದ್ದ.
ರೋಗಿ-573: ಮಂಡ್ಯ ಜಿಲ್ಲೆ ಮಳವಳ್ಳಿಯ 12 ವರ್ಷದ ಬಾಲಕ. ರೋಗಿ-179ರ ಸಂಪರ್ಕ ಹೊಂದಿದ್ದ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 576
ಮೃತಪಟ್ಟವರು: 22
ಗುಣಮುಖರಾದವರು: 235
ಹೊಸ ಪ್ರಕರಣಗಳು: 11
ಇತರೆ ಮಾಹಿತಿ: ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.#ಮನೆಯಲ್ಲೇಇರಿ#KarnatakaFightsCorona @BSYBJP pic.twitter.com/JJebo9jPU4
— CM of Karnataka (@CMofKarnataka) May 1, 2020
ರೋಗಿ-574: ಬೆಳಗಾವಿ ಜಿಲ್ಲೆ ರಾಯಬಾಗ್‍ನ 55 ವರ್ಷದ ಪುರುಷ. ರೋಗಿ-301ರ ಸಂಪರ್ಕದಲ್ಲಿದ್ದರು.
ರೋಗಿ-575: ಬೆಳಗಾವಿ ಜಿಲ್ಲೆ ರಾಯಬಾಗ್‍ನ 30 ವರ್ಷದ ಮಹಿಳೆ. ರೋಗಿ-301ರ ಸಂಪರ್ಕದಲ್ಲಿದ್ದರು.
ರೋಗಿ-576: ಬೆಳಗಾವಿ ಜಿಲ್ಲೆ ರಾಯಬಾಗ್‍ನ 50 ವರ್ಷದ ಪುರುಷ. ರೋಗಿ-301ರ ಸಂಪರ್ಕದಲ್ಲಿದ್ದರು.