ಕನ್ನಡದ ‘ಮಾಣಿಕ್ಯ’ (Maanikya) ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ತಮಗಾದ ಲೈಂಗಿಕ ಕಿರುಕುಳ ನೆನೆದು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ಪೋಷಕರಿಗೆ ನಟಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ
ವರಲಕ್ಷ್ಮಿ ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ಇದೀಗ ಅವರು ‘ಡ್ಯಾನ್ಸ್ ಜೋಡಿ ಡ್ಯಾನ್ಸ್’ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ. ಇದರ ಪ್ರೋಮೋ ಇದೀಗ ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಡ್ಯಾನ್ಸ್ ಮೂಲಕ ತೋರಿಸಿದ್ದಾರೆ. ಇದನ್ನು ನೋಡಿ ವರಲಕ್ಷ್ಮಿ ಭಾವುಕರಾಗಿದ್ದಾರೆ.
ಬಾಲ್ಯದಲ್ಲಿ ನಾನು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ನನ್ನ ಕಥೆಯೂ ನಿನ್ನ ಕಥೆಯೂ ಒಂದೇ ಎಂದಿದ್ದಾರೆ ನಟಿ. ಪೋಷಕರು ಅವರ ಕೆಲಸದಲ್ಲಿ ನಿರತರಾಗಿದ್ದರು. ಹಾಗಾಗಿ ನಾನು ಚಿಕ್ಕವಳಿದ್ದಾಗ ನನ್ನನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆಗ 5ರಿಂದ 6 ಜನ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಿನ್ನ ಸ್ಟೋರಿ ನನ್ನ ಸ್ಟೋರಿ ಎರಡು ಒಂದೆ. ನನಗೆ ಮಕ್ಕಳಿಲ್ಲ ಆದರೆ ನಾನು ಪೋಷಕರಿಗೆ ಹೇಳುವುದಿಷ್ಟೇ, ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ವೇದಿಕೆಯಲ್ಲಿ ವರಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.
ಅಂದಹಾಗೆ, ಇನ್ನೂ ಕಳೆದ ವರ್ಷ ಜುಲೈನಲ್ಲಿ ಉದ್ಯಮಿ ನಿಕೋಲಾಯ್ ಜೊತೆ ನಟಿ ವರಲಕ್ಷ್ಮಿ ಹೊಸ ಬಾಳಿಗೆ ಕಾಲಿಟ್ಟರು. ವಿದೇಶದಲ್ಲಿ ಇಬ್ಬರ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.