ಮಾರಿಷಸ್: ಅಯೋಧ್ಯೆಯಲ್ಲಿ (Ayodhya) ರಾಮನ ಪ್ರಾಣ ಪ್ರತಿಷ್ಠಾ (Ram Prana Prathista) ಕಾರ್ಯಕ್ರಮ ವೀಕ್ಷಿಸಲು ಮಾರಿಷಸ್ (Mauritius) ಸರ್ಕಾರವು ಜ.22 ರಂದು ಹಿಂದೂ (Hindu) ಧರ್ಮೀಯ ಉದ್ಯೋಗಿಗಳಿಗೆ 2 ಗಂಟೆಗಳ ವಿಶೇಷ ಸಮಯಾವಕಾಶ ನೀಡುವುದಾಗಿ ಪ್ರಕಟಿಸಿದೆ.
ಜ.22 ರಂದು ಎರಡು ಗಂಟೆಗಳ ವಿರಾಮ ನೀಡಬೇಕೆಂದು ಹಿಂದೂ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಮನವಿಗೆ ಮಾರಿಷಸ್ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ
Advertisement
Advertisement
ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ನೇತೃತ್ವದ ಮಂತ್ರಿ ಮಂಡಳಿಯು ಶುಕ್ರವಾರ ಸಭೆ ಸೇರಿ ರಾಮಮಂದಿರ ಧಾರ್ಮಿಕ ಕಾರ್ಯಕ್ರಮವು ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿದೆ ಮತ್ತು ಆಚರಣೆಯಲ್ಲಿ ಭಕ್ತರು ಭಾಗವಹಿಸಲು ಅನುಕೂಲ ಮಾಡಿಕೊಡಲು 2 ಗಂಟೆಗಳ ವಿರಾಮ ನೀಡುವುದಾಗಿ ಪ್ರಕಟಿಸಿತು. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?
Advertisement
ಮಾರಿಷಸ್‌ನನಲ್ಲಿ ಹಿಂದೂ ಧರ್ಮವು ಪ್ರಮುಖ ಸ್ಥಾನವನ್ನು ಹೊಂದಿದೆ. 2011ರ ಅಂಕಿಅಂಶಗಳ ಪ್ರಕಾರ ಹಿಂದೂಗಳು ಸರಿಸುಮಾರು 48.5 ಪ್ರತಿಶತ ಜನಸಂಖ್ಯೆ ಹೊಂದಿದ್ದಾರೆ.
Advertisement
ಆಫ್ರಿಕಾ ಖಂಡದ ದೇಶಗಳ ಪೈಕಿ ಮಾರಿಷಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಂದೂಗಳಿದ್ದಾರೆ. ಜಾಗತಿಕವಾಗಿ ಭಾರತ, ನೇಪಾಳದ ನಂತರ ಅತಿ ಹೆಚ್ಚು ಹಿಂದೂಗಳಿರುವ ಮೂರನೇ ರಾಷ್ಟ್ರ ಮಾರಿಷಸ್ ಆಗಿದೆ. ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ
ವಸಾಹತುಶಾಹಿ ಯುಗದಲ್ಲಿ ಭಾರತೀಯರನ್ನು ಫ್ರೆಂಚ್ ಮತ್ತು ಬ್ರಿಟಿಷ್ ತೋಟಗಳಿಗೆ ಒಪ್ಪಂದದ ಕಾರ್ಮಿಕರಾಗಿ ಕರೆತರಲಾಗಿತ್ತು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ಭಾರತೀಯ ರಾಜ್ಯಗಳಿಂದ ವಲಸೆ ಬಂದ ಪರಿಣಾಮ ಮಾರಿಷಸ್‌ನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದೆ.