– ಧಾರ್ಮಿಕ ಸಂಘಟನೆಗಳು, ಸಂತರ ವಿರೋಧದ ಬೆನ್ನಲ್ಲೇ ಪ್ರೋಗ್ರಾಂ ಕ್ಯಾನ್ಸಲ್
ಲಕ್ನೋ: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ (Mathura) ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಅವರ ಕಾರ್ಯಕ್ರಮವನ್ನ ರದ್ದುಗೊಳಿಸಲಾಗಿದೆ. ಸ್ಥಳೀಯ ಮಠಾಧೀಶರು, ಧಾರ್ಮಿಕ ಸಂಘಟನೆಗಳು ಹಾಗೂ ಸಂತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮವನ್ನ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ‘ಶ್ರೀಕೃಷ್ಣ ಲೀಲೆ’ ಪ್ರದರ್ಶನ ನಡೆಯುತ್ತದೆ. ಜೊತೆಗೆ, ಪ್ರಾರ್ಥನೆ ಸಲ್ಲಿಸಲು ಧರ್ಮಗುರುಗಳು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಅವರನ್ನು ಕರೆಸಿ ಡಿಜೆ ಕಾರ್ಯಕ್ರಮ ಆಯೋಜಿಸಿರೋದು ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೋಗಿಲು ಲೇಔಟ್ ತೆರವು ಪ್ರಕರಣ – ಪೌರತ್ವದ ಬಗ್ಗೆ NIA ತನಿಖೆ ಆಗಲಿ; ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹ
ಸನ್ನಿ ಅವರನ್ನ ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಪುಣ್ಯ ಭೂಮಿ ಮತ್ತು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ. ಸನ್ನಿ ಲಿಯೋನ್ ಅವರು ಅಶ್ಲೀಲತೆ ಪ್ರಚಾರ ಮಾಡುತ್ತಾರೆ. ಅಂಥವರನ್ನ ಈ ಪುಣ್ಯಮಣ್ಣಿನಿಂದ ದೂರವಿಡಬೇಕು ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ ತಿಳಿಸಿದ್ದಾರೆ.

2026ರ ಹೊಸ ವರ್ಷಾಚರಣೆ ಪ್ರಯುಕ್ತ ಜನವರಿ 1 ರ ಬುಧವಾರ ಲೈವ್ ಡಿಜೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದರಲ್ಲಿ ಸನ್ನಿ ಲಿಯೋನ್ ಭಾಗವಹಿಸಬೇಕಿತ್ತು. ಆದ್ರೆ ಧಾರ್ಮಿಕ ಸಂಘಟನೆಗಳು, ಸಂತರ ವಿರೋಧದ ಹಿನ್ನೆಲೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಗ್ರಾಹಕರ ಟಿಕೆಟ್ ಹಣವನ್ನ ಮರುಪಾವತಿ ಮಾಡುವುದಾಗಿಯೂ ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: 2026 ರಲ್ಲಿ ಭಾರತ-ಪಾಕಿಸ್ತಾನ ಸಂಘರ್ಷ ಸಾಧ್ಯತೆ; ಅಮೆರಿಕದ ಪ್ರಮುಖ ಥಿಂಕ್ ಟ್ಯಾಂಕ್ ಎಚ್ಚರಿಕೆ

