ರಾಂಚಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಾಲೆಯ ಗಣಿತ ಶಿಕ್ಷಕ ಮತ್ತು ಗುಮಾಸ್ತರನ್ನೇ ಮರಕ್ಕೆ ಕಟ್ಟಿಹಾಕಿ ವಿದ್ಯಾರ್ಥಿಗಳು ಥಳಿಸಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯ ವಸತಿ ಶಾಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡ ವಸತಿ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಇದನ್ನೂ ಓದಿ: ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ, ಅಮಾನತುಗೊಂಡ ಬಿಜೆಪಿ ನಾಯಕಿ ಬಂಧನ
Advertisement
Advertisement
ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಶನಿವಾರ ಪ್ರಕಟಿಸಿದ 9 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ 32 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಅನುತ್ತೀರ್ಣಕ್ಕೆ ಗ್ರೇಡ್ ‘ಡಿಡಿ’ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಏಕೆಂದರೆ ಶಾಲಾ ಆಡಳಿತವು ಘಟನೆಯ ಬಗ್ಗೆ ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಘಟನೆಯ ಪರಿಶೀಲನೆ ನಂತರ ದೂರು ದಾಖಲಿಸಲು ಶಾಲಾ ಅಧಿಕಾರಿಯನ್ನು ಕೇಳಿದೆವು. ಆದರೆ ಅವರು ನಿರಾಕರಿಸಿದರು. ಇದರಿಂದ ವಿದ್ಯಾರ್ಥಿಗಳ ಬದುಕು ಹಾಳಾಗಬಹುದು ಎಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದ 82ರ ವೃದ್ಧ
Advertisement
ಶಿಕ್ಷಕನನ್ನು ಸುಮನ್ ಕುಮಾರ್ ಹಾಗೂ ಗುಮಾಸ್ತ ಸೋನೆರಾಮ್ ಚೌರೆ ಎಂದು ಗುರುತಿಸಲಾಗಿದೆ. ಅವರು ಕೂಡ ಪೊಲೀಸರಿಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಒ ಅನಂತ್ ಝಾ ಮಾತನಾಡಿ, ಸಂತ್ರಸ್ತ ಶಿಕ್ಷಕ ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ನಂತರ ಕಾರಣ ತಿಳಿಸದೇ ಅವರನ್ನು ಆ ಸ್ಥಾನದಿಂದ ತೆಗೆಯಲಾಗಿದೆ. ಇದು ಶಿಕ್ಷಕರ ನಡುವಿನ ಪೈಪೋಟಿಯ ಪ್ರಕರಣವಾಗಿರಬಹುದು. ಶಾಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 9 ಮತ್ತು 10ನೇ ತರಗತಿಗಳನ್ನು ಎರಡು ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.