ರಾಂಚಿ: ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಬಂಧಿಸಲಾಗಿದೆ. ಸೀಮಾ ಪತ್ರಾ ತನ್ನ ಮನೆಯ ಕೆಲಸದಾಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ ಪ್ರಕರಣ ಬಯಲಿಗೆ ಬಂದ ಬಳಿಕ ಜಾರ್ಖಂಡ್ ಬಿಜೆಪಿ ಅವರನ್ನು ಅಮಾನತುಗೊಳಿಸಿದೆ.
ಸೀಮಾ ಪತ್ರಾ ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತ್ರಾ ಅವರು ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರಾ ಅವರ ಪತ್ನಿ. ಸುನೀತಾ ಎಂದು ಗುರುತಿಸಲಾದ ಕೆಲಸದಾಳುವಿಗೆ ಸೀಮಾ ಟಾಯ್ಲೆಟ್ ಅನ್ನು ನಾಲಿಗೆಯಿಂದ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮನೆಕೆಲಸದಾಕೆಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ ನಾಯಕಿ – ಬಿಜೆಪಿಯಿಂದ ಅಮಾನತು
Advertisement
Advertisement
ಸೀಮಾ ಪಾತ್ರಾ ತನ್ನ ಮನೆ ಕೆಲಸದಾಕೆಗೆ ಕಿರುಕುಳ ನೀಡಿದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ತನ್ನ ಗಮನಕ್ಕೆ ತೆಗೆದುಕೊಂಡಿದೆ. ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ, ಸಮಿತಿ ಜಾರ್ಖಂಡ್‌ನ ಡಿಜಿಪಿಗೆ ಪತ್ರ ಬರೆದಿದ್ದು, ಈ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಆರೋಪಿಯನ್ನು ಬಂಧಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದ 82ರ ವೃದ್ಧ