ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ

Public TV
1 Min Read
Siddaramaiah 2 2

– ಕಂಪನಿಗಳಿಂದಲೂ ಪರಿಹಾರ ಕೊಡಿಸ್ತೀವಿ.. ಡ್ರಗ್‌ ಕಂಟ್ರೋಲರ್‌ ಅಮಾನತಿಗೆ ಸೂಚನೆ ಕೊಟ್ಟಿದ್ದೀನಿ
– ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಎಂ ಗರಂ

ಬೆಂಗಳೂರು: ಬಳ್ಳಾರಿಯಲ್ಲಿ (Ballary) ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು. ಆಯಾ ಕಂಪನಿಗಳಿಂದಲೂ ಪರಿಹಾರ ಕೊಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಅವರು, ನಾಲ್ಕು ಮಂದಿ ಬಾಣಂತಿಯರು ಸಾವನ್ನಪ್ಪಿದ್ದರು. ನಾವು ಎಕ್ಸ್‌ಪರ್ಟ್ ಕಮಿಟಿ ಮಾಡಿದ್ದೆವು. ರಾಜೀವ್, ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳ ಕಮಿಟಿ ಮಾಡಿದ್ದೆವು. ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯಾಗಿದೆ. ಅದನ್ನ ಸರಬರಾಜು ಮಾಡಿದ್ದವರು ಪಶ್ಚಿಮ ಬಂಗಾಳ ಫಾರ್ಮಾಸುಟಿಕಲ್ಸ್‌ನವರು. ಅದನ್ನ ಡ್ರಗ್ ಕಂಟ್ರೋಲರ್ ಸರಬರಾಜು ಮಾಡ್ತಾರೆ. ಕೂಡಲೇ ಡ್ರಗ್ಸ್ ಕಂಟ್ರೋಲರ್ ಸಸ್ಪೆಂಡ್‌ಗೆ ಸೂಚನೆ ನೀಡಿದ್ದೇನೆ. ಪಶ್ಚಿಮ ಬಂಗಾಳದ ಫಾರ್ಮಾಸುಟಿಕಲ್ಸ್ ಕಂಪನಿ ಬ್ಲಾಕ್‌ಲಿಸ್ಟ್‌ಗೆ ಸೇರಿಸುವಂತೆ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಬಳ್ಳಾರಿ | ಬಾಣಂತಿಯರ ಸರಣಿ ಸಾವಿಗೆ IV ದ್ರಾವಣ ಕಾರಣ – ವರದಿಯಲ್ಲಿ ಬಹಿರಂಗ

Death after giving birth in ballary

ಸಾವನ್ನಪ್ಪಿದ್ದವರಿಗೆ ಪರಿಹಾರ ಕೊಡ್ತೇವೆ. ತಲಾ 2 ಲಕ್ಷ ಪರಿಹಾರ ಕೊಡ್ತೇವೆ. ಆ ಕಂಪನಿಗಳಿಂದಲೂ ಪರಿಹಾರ ಕೊಡಿಸ್ತೇವೆ. ಕರ್ನಾಟಕ ಮೆಡಿಕಲ್‌ ಸಪ್ಲೈಗೆ ನವರಿಗೆ ನೋಟಿಸ್ ಕೊಡೋಕೆ ಹೇಳಿದ್ದೇನೆ. 192 ಕಂಪನಿಗಳು ಸಪ್ಲೈ‌ ಮಾಡುತ್ತವೆ. ಡ್ರಗ್ಸ್ ಕಂಟ್ರೋಲ್ ಬೋರ್ಡ್ ಆಡಳಿತ ಬದಲಾವಣೆ ಮಾಡುವಂತೆ ಹೇಳಿದ್ದೇನೆ. ಒಂದು ಕಮಿಟಿಯನ್ನ ರಚನೆ ಮಾಡ್ತೇವೆ. ಬಳ್ಳಾರಿ ಜಿಲ್ಲಾ ಸರ್ಜನ್‌ಗೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಹೇಳಿದರು.

ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ರವಾನಿಸಿದ್ದೇವೆ. ಸರ್ಜರಿ ಮಾಡಿದ್ದ ವೈದ್ಯರ ತಪ್ಪಿಲ್ಲ ಅಂತಾ ಬಂದಿದೆ. ಅವರಿಗೂ ಈ ರೀತಿ ಆಗದಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ, ಅಧಿಕಾರಿಗಳ ವಿರುದ್ಧ ಗರಂ ಆದರು.

Share This Article