ಲಂಡನ್: ಯಾವುದೇ ಮನೋರಂಜನಾ ಕಾರ್ಯಕ್ರಮಗಳಲ್ಲೂ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿ ಪ್ರೇಕ್ಷಕರ ಗಮನ ಸೆಳೆಯುವುದು ಇದೀಗ ಸರ್ವೇ ಸಾಮಾನ್ಯ. ಇದು ಕ್ರಿಕೆಟ್‌ಗೂ ಹೊರತೇನಲ್ಲ, ಹೊಸ ಹೊಸ ಐಡಿಯಾಗಳನ್ನು ಬಳಸಿ ಆಟಗಾರರನ್ನು ಪರಿಚಯಿಸುವುದು ಟ್ರೆಂಡ್. ಇದು ಅಭಿಮಾನಿಗಳಿಗೆ ಕುತೂಹಲ ಕೆರಳಿಸುವಂತೆ ಮಾಡುತ್ತದೆ.
ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಬ್ಲಾಸ್ಟ್ ಪಂದ್ಯದಲ್ಲಿ ಒಂದು ವಿನೂತನ ಉಪಾಯವನ್ನು ಮಾಡಲಾಗಿತ್ತು. ಪಂದ್ಯದಲ್ಲಿ ಬಳಸಬೇಕಿದ್ದ ಚೆಂಡನ್ನು ಮೈದಾನಕ್ಕೆ ಅಂಪೈರ್ ಹಿಡಿದುಕೊಂಡು ಬಂದಿರಲಿಲ್ಲ. ಬದಲಿಗೆ ರಿಮೋಟ್ ಕಂಟ್ರೋಲ್‌ನ ಪುಟ್ಟ ಕಾರೊಂದು ಮೈದಾನ ಪ್ರವೇಶಿಸಿ, ಚೆಂಡನ್ನು ಹಿಡಿದುಕೊಂಡು ಬಂದಿದೆ. ಇದನ್ನೂ ಓದಿ: ಸರಣಿ ಗೆಲ್ಲುವ ತವಕದಲ್ಲಿ ರೋಹಿತ್ ಪಡೆ – ತಂಡಕ್ಕೆ ಮರಳಿದ ಕೊಹ್ಲಿ, ಜಡೇಜಾ, ಬುಮ್ರಾ
Advertisement
Advertisement
ಟಿ20 ಬ್ಲಾಸ್ಟ್ 2022ಯ ಸರ‍್ರೆ ಹಾಗೂ ಯಾರ್ಕ್‌ಷೈರ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿಮೋಟ್ ನಿಯಂತ್ರಿತ ಕಾರೊಂದು ಚೆಂಡನ್ನು ಎತ್ತಿಕೊಂಡು ಬೌಂಡರಿಯಿಂದ ಮೈದಾನದ ಮಧ್ಯ ಭಾಗದವರೆಗೆ ಹೋಗಿದೆ. ಇದರ ವೀಡಿಯೋವನ್ನು ಪಂದ್ಯಾವಳಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Advertisement
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯಾರ್ಕ್‌ಷೈರ್ ಬೌಲಿಂಗ್‌ನಲ್ಲಿ ಸರ‍್ರೆಯನ್ನು 1 ರನ್‌ನಿಂದ ಸೋಲಿಸಿತು. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಈವರೆಗೆ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ
Advertisement
???? @Vitality_UK bringing out the match ball in style ???? pic.twitter.com/rks0SBXabZ
— Vitality Blast (@VitalityBlast) July 6, 2022
ಟಾಸ್ ಗೆದ್ದ ಸರ‍್ರೆ ನಾಯಕ ವಿಲ್ ಜಾಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯಾರ್ಕ್‌ಷೈರ್ ತನ್ನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅವರು 62 ರನ್ ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದ್ದರು. ಆದರೆ ವಿಲ್ ಫ್ರೇನ್ ಅವರು 14 ಎಸೆತಗಳಲ್ಲಿ ಅಜೇಯ 32 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.