– ಬಡವರು, ಅಸಹಾಯಕ ಕಾರ್ಮಿಕರು, ವಿಧವೆಯರೇ ಟಾರ್ಗೆಟ್
ಲಕ್ನೋ: ಆರ್ಥಿಕ ನೆರವು, ವಿವಾಹ ಸೇರಿದಂತೆ ಹತ್ತು ಹಲವು ಭರವಸೆಗಳನ್ನ ಹಿಂದೂಗಳನ್ನ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಧಾರ್ಮಿಕ ಮತಾಂತರ ತಂಡದ (Religious Conversion Gang) ಮಾಸ್ಟರ್ ಮೈಂಡ್ ಮತ್ತು ಆತನ ಸಹಾಯಕನನ್ನ ಉತ್ತರ ಪ್ರದೇಶ ಪೊಲೀಸರ (Uttar Pradesh Police) ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತ್ತು ಸಹಯಾಕ ನೀತು ಅಲಿಯಾಸ್ ನಸ್ರೀನ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ಬಲರಾಂಪುರ ಜಿಲ್ಲೆಯ ಮಧಪುರ ನಿವಾಸಿಗಳೆಂದು ತಿಳಿದುಬಂದಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು
ಜಲಾಲುದ್ದೀನ್ ವಿರುದ್ಧ ಉತ್ತರ ಪ್ರದೇಶ ಕೋರ್ಟ್ (UP Court) ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಬೆನ್ನಲ್ಲೇ ಆತನ ಸುಳಿವು ನೀಡಿದವರಿಗೆ ಯುಪಿ ಪೊಲೀಸರು 50,000 ರೂ. ನಗದು ಬಹುಮಾನ ಘೋಷಿಸಿದ್ದರು ಎಂದು ವರದಿಗಳು ತಿಳಿಸಿವೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಲಕ್ನೋ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಬಿಎನ್‌ಎಸ್ ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಹಿಂದೂ ಮತ್ತು ಇತರ ಮುಸ್ಲಿಮೇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರ ಮಾಡಲು ಸಂಘಟಿತವಾಗಿ ಕೆಲಸ ಮಾಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್ ಕಡ್ಡಾಯ
ಮುಖ್ಯವಾಗಿ ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗದವರು ಮತ್ತು ವಿಧವೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು ಹಾಗೂ ವಿವಾಹದ ಭರವಸೆ ನೀಡಿ ಮತಾಂತರಗೊಳಿಸುತ್ತಿದ್ದರು. ಅದು ಸಾಧ್ಯವಾಗದೇ ಇದ್ದಾಗ ಬೆದರಿಸಿ ಬಲವಂತವಾಗಿ ಮತಾಂತರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದು ಮತಾಂತರದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.
ಇದೇ ಪ್ರಕರಣದಲ್ಲಿ ಕಳೆದ ಏಪ್ರಿಲ್ 8ರಂದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು. ಉಳಿದ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?