ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ನಂಬರ್ ಗೇಮ್ ಆರಂಭವಾಗಿದ್ದು ಶಾಸಕರ ನಂಬರ್ ಏರಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ.
ಲೋಕ ಫಲಿತಾಂಶದ ಬಳಿಕ ಹೆಚ್‍ಡಿಕೆ ಸರ್ಕಾರ ಪತನಕ್ಕೆ ಬಿಜೆಪಿ ಸೈಲೆಂಟ್ ಪ್ಲಾನ್ ಮಾಡುತ್ತಿದೆ. ಮೇ 23ರ ನಂತರ ಸರಳ ಬಹುಮತಕ್ಕೆ ಬರೀ 5 ನಂಬರ್ ಕೊರತೆ ಬರುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಇದಕ್ಕಾಗಿಯೇ ಈಗಾಗಲೇ ಬಿಎಸ್ ಯಡಿಯೂರಪ್ಪ ಆಪ್ತರ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಚರ್ಚೆಯೇನು?
ಈಗ ನಮ್ಮ ಬಳಿ 104 ಶಾಸಕರು ಇದ್ದಾರೆ. ಉಪ ಚುನಾವಣೆ ನಡೆಯಲಿರುವ ಚಿಂಚೋಳಿ ಮತ್ತು ಕುಂದಗೋಳ ಗೆದ್ದರೆ 106 ಆಗುತ್ತೇವೆ. ಮೇ 23ರ ನಂತರ ಚುನಾವಣಾ ಫಲಿತಾಂಶ ನೋಡಿಕೊಂಡು ಮತ್ತಷ್ಟು ಶಾಸಕರು ಬರುತ್ತಾರೆ. ಬಳಿಕ ಪಕ್ಷೇತರರು ಇಬ್ಬರು ಆದರೆ 108 ಆಗುತ್ತೇವೆ. ಆಗ ನಮಗೆ ನಂಬರ್ 5 ಬೇಕಾಗುತ್ತದೆ. ಆ 5 ನಂಬರ್‍ಗೆ ಕಷ್ಟಪಡಬೇಕಿಲ್ಲ. ಹೀಗಾಗಿ ಆಪರೇಷನ್ ಕಮಲ ಸುಲಭವಾಗಿ ಆಗುತ್ತದೆ. ಹೀಗೆ ಬಿಎಸ್‍ವೈ ಅವರು ತಮ್ಮ ಆಪ್ತ ಶಾಸಕರ ಬಳಿ ಮಹಾ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಹಾಗಾದರೆ ನಿಜಕ್ಕೂ ಬಿಜೆಪಿಯೇ ಆಪರೇಷನ್ ಸರ್ಕಾರ ಮಾಡಿಬಿಡುತ್ತಾ ಅಥವಾ ಬಿಎಸ್‍ವೈ ಹೇಳಿಕೆ ಕೇವಲ ಶಾಸಕರನ್ನು ಹುರಿದುಂಬಿಸಲಷ್ಟೇನಾ ಅನ್ನೋ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ `ಮೇ’ಜರ್ ಆಪರೇಷನ್ ಭಾರೀ ಕುತೂಹಲ ಮೂಡಿಸಿದೆ.