ಮಾಸ್ಟರ್ ಆನಂದ್ ಈಗ ‘ನಾ ಕೋಳಿಕ್ಕೇ ರಂಗ’

Public TV
1 Min Read
Master Anand Main

ಬೆಂಗಳೂರು: ಶ್ರೀದುರ್ಗಾ ಆಂಜನೇಯ ಮೂವೀಸ್ ಲಾಂಛನದಲ್ಲಿ ಎಸ್.ಟಿ.ಸೋಮಶೇಖರ್ ಅವರು ನಿರ್ಮಿಸುತ್ತಿರುವ ‘ನಾ ಕೋಳಿಕ್ಕೇ ರಂಗ` ಚಿತ್ರದ ನಾಯಕರಾಗಿ ಮಾಸ್ಟರ್ ಆನಂದ್ ಅಭಿನಯಿಸಿದ್ದಾರೆ.

ಗೊರವಾಲೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದ್ವಾರಕೀಶ್, ಹೊನ್ನವಳ್ಳಿ ಕೃಷ್ಣ, ದ್ವಾರ್ಕಿ, ಬೂದಾಳ್ ಕೃಷ್ಣಮೂರ್ತಿ, ಕೆ.ವಿ.ಪ್ರಸಾದ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಗೊರವಾಲೆ ಮಹೇಶ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಕುರಿತು ತರಬೇತಿಯನ್ನು ಪಡೆದಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

Master Anand A

5 ಹಾಡುಗಳಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗಾನೂರು ಸಂಗೀತ ನೀಡುತ್ತಿದ್ದಾರೆ. `ಒಳಿತು ಮಾಡು ಮನುಸ` ಹಾಡಿನ ಖ್ಯಾತಿಯ ಋಷಿ ಹಾಗೂ ಹನಸೊಗೆ ಸೋಮಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಧನುಷ್ ಛಾಯಾಗ್ರಹಣ, ವಿಶ್ವ ಸಂಕಲನ, ಅಶೋಕ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಮಾಸ್ಟರ್ ಆನಂದ್ ಅವರಿಗೆ ನಾಯಕಿಯಾಗಿ ರಾಜೇಶ್ವರಿ ಅಭಿನಯಿಸಿದ್ದಾರೆ. ಭವ್ಯ, ಹೊನ್ನವಳ್ಳಿ ಕೃಷ್ಣ, ಶಕಿಲಾ, ಬಿರಾದಾರ್, ಗುರುರಾಜ್ ಹೊಸಕೋಟೆ, ರಾಕ್‍ಲೈನ್ ಸುಧಾಕರ್, ಗಡ್ಡಪ್ಪ, ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Master Anand B

Share This Article