ಬಾಲಿವುಡ್ ನಟ ನಟಿಯರು ಹಾಗೂ ಕ್ರಿಕೆಟ್ ತಾರೆಗಳ ಹೆಸರಿನಲ್ಲಿ ಭಾರೀ ವಂಚನೆ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty), ಅಭಿಷೇಕ್ ಬಚ್ಚನ್ (Abhishek Bachchan), ಕ್ರಿಕೆಟಿಗ ಧೋನಿ (MS Dhoni) ಸೇರಿದಂತೆ ಹಲವರ ಪ್ಯಾನ್ ನಂಬರ್ ಮತ್ತು ಆಧಾರ ನಂಬರ್ ಬಳಸಿಕೊಂಡು ವಂಚಕರು ಕ್ರೆಡಿಟ್ ಕಾರ್ಡ್ ಖರೀದಿಸಿದ್ದರು ಎನ್ನುವ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
ಗೂಗಲ್ ನಲ್ಲಿ ಲಭ್ಯವಿರುವ ಜಿ.ಎಸ್.ಟಿ ಗುರುತಿನ ಸಂಖ್ಯೆ ಬಳಸಿಕೊಂಡು ಮತ್ತು ಆನ್ ಲೈನ್ ನಲ್ಲಿ ಸಿಗುವ ಅವರ ಹುಟ್ಟಿದ ದಿನಾಂಕ ಹಾಗೂ ಇತರ ಮಾಹಿತಿಯನ್ನು ಪಡೆದುಕೊಂಡು ವಂಚಕರು ಭಾರೀ ವಂಚನೆಗೆ ಮುಂದಾಗಿದ್ದರು. ಪುಣೆ ಮೂಲದ ಸ್ಟಾರ್ಟ್ ಅಪ್ ಕಂಪನಿಯಿಂದ ತಾರೆಯರು ಹೆಸರಿನಲ್ಲಿ ಅವರು ಕ್ರೆಡಿಟ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು
ವಂಚನೆಯ ಜಾಲವನ್ನು ಪತ್ತೆ ಹಚ್ಚಿದಾಗ ಮತ್ತಷ್ಟು ಆಘಾತಕಾರಿ ಸುದ್ದಿಗಳು ಪೊಲೀಸರಿಗೆ ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಕೇವಲ ಬೆರಳೆಣಿಕೆಯ ಕಲಾವಿದರು ಮಾತ್ರವಲ್ಲ, ಬಾಲಿವುಡ್ ಚಿತ್ರರಂಗದ ನಿರ್ದೇಶಕರು ಮತ್ತು ಇನ್ನೂ ಕೆಲವು ಮಾಡೆಲ್ ಗಳ ಪ್ಯಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ದುರುಪಯೋಗ ಮಾಡಿಕೊಂಡು ಮತ್ತಷ್ಟು ವಂಚನೆಗೆ ಅವರು ಮುಂದಾಗಿದ್ದರು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.