ರೋಮ್: ಆಕ್ಸಿಜನ್ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಸಾಗಿಸುತ್ತಿದ್ದ ವ್ಯಾನ್ ಸ್ಫೊಟಗೊಂಡು ಹಲವಾರು ವಾಹನಗಳು (Vehicles) ಬೆಂಕಿಗೆ (Fire) ಆಹುತಿಯಾದ ಘಟನೆ ಉತ್ತರ ಇಟಲಿಯ (Italy )ಮಧ್ಯಭಾಗದಲ್ಲಿ ನಡೆದಿದೆ.
ಸ್ಫೋಟದಿಂದಾಗಿ ಸ್ಥಳದಲ್ಲಿ ದಟ್ಟನೆಯ ಹೊಗೆ ತುಂಬಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರುಗಳನ್ನು ನಂದಿಸಿದಾಗ, ಹತ್ತಿರದ ಕಟ್ಟಡಗಳ ಕಿಟಕಿಗಳಿಂದ ದಟ್ಟನೆಯ ಹೊಗೆಯು ಕಾಣಿಸಿತು. ಘಟನೆಯಲ್ಲಿ ಯಾವುದೇ ಸಾವು ಈವರೆಗೂ ಸಂಭವಿಸಿಲ್ಲ. ಬದಲಿಗೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗೇಮ್ಸ್‌ಕ್ರಾಫ್ಟ್ ಜಿಎಸ್‍ಟಿ ಶೋಕಾಸ್ – ರದ್ದುಗೊಳಿಸಿದ ಹೈಕೊರ್ಟ್
Advertisement
Advertisement
ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಲಾ ರಿಪಬ್ಲಿಕಾ, ಮಿಲನ್‌ನ ಪೋರ್ಟಾ ರೊಮಾನಾ ಪ್ರದೇಶದಲ್ಲಿ ವಸಾರಿ ಮೂಲಕ ಮೂಲೆಯಲ್ಲಿ ಪಿಯರ್ ಲೊಂಬಾರ್ಡೊ ಮೂಲಕ ವಾಹನ ಸ್ಫೋಟಿಸಿದೆ. ಕಾರುಗಳಿಗೆ ಆವರಿಸಿದ್ದ ಬೆಂಕಿಯನ್ನು ತಕ್ಷಣ ನಂದಿಸಲಾಯಿತು. ಆದರೆ ಸ್ಥಳದಲ್ಲಿ ಹೊಗೆ ಆವರಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ