ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

Public TV
1 Min Read
Tsunami

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಶುವಾಯಾದಿಂದ ದಕ್ಷಿಣಕ್ಕೆ 136 ಮೈಲುಗಳಷ್ಟು ದೂರದಲ್ಲಿರುವ ಡ್ರೇಕ್ ಪ್ಯಾಸೇಜ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದಕ್ಷಿಣ ಚಿಲಿ (Chile) ಮತ್ತು ಅರ್ಜೆಂಟೀನಾದಲ್ಲಿ (Argentina) ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ.

ಚಿಲಿಯ ಮಗಲ್ಲೇನ್ಸ್ ಪ್ರದೇಶ ಮತ್ತು ಅಂಟಾರ್ಕ್ಟಿಕ್ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ 3 ಮೀಟರ್‌ಗಳವರೆಗೆ ಅಲೆಗಳು ಏಳವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಕ್ಕೆ ಹೋಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆ ವಿಜಯನ್‌, ತರೂರ್‌ ಕುಳಿತಿರುವುದು ಹಲವರ ನಿದ್ದಗೆಡಿಸುತ್ತೆ: ಮೋದಿ

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ. ಚಿಲಿಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಕಚೇರಿ (ONEMI) ಸ್ಥಳಾಂತರಗೊಂಡ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.

ಎರಡೂ ದೇಶಗಳ ಕರಾವಳಿ ಭಾಗಗಳು ಹೆಚ್ಚಿನ ಅಪಾಯದಲ್ಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಕರಾವಳಿಯ ನಿವಾಸಿಗಳು ಅಧಿಕೃತ ಮಾಹಿತಿ ನೀಡುವವರೆಗೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಲೆಗಳ ಆತಂಕ ಕಡಿಮೆಯಾಗುವವರೆಗೂ ಸುರಕ್ಷಿತ ಪ್ರದೇಶಗಳಲ್ಲೇ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ; ಹಲವೆಡೆ ಧರೆಗುರುಳಿದ ಮರ – ಎಲ್ಲೆಲ್ಲಿ ಎಷ್ಟು ಮಳೆ?

Share This Article