ಬೆಂಗಳೂರು: ಒಬ್ಬ ಯೋಧನಾಗಿ ಪಾತ್ರ ಮಾಡಿದಕ್ಕೆ ತುಂಬಾ ಖುಷಿಯಾಗಿದ್ದೇನೆ. ನನಗೆ ಚಿಕ್ಕಂದಿನಿಂದಲೂ ದೇಶ, ಯೋಧ ಅಂದರೆ ನನಗೆ ತುಂಬಾ ಇಷ್ಟ. ಸಿನಿಮಾದ ಎರಡನೇ ಭಾಗ ತುಂಬ ಇಷ್ಟವಾಗುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ‘ಮಾಸ್ ಲೀಡರ್’ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡು ಮುನ್ನುಗುತ್ತಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಗಲಾಟೆಗಳು ನಡೆದವು. ನೀವು ಇಂಡಿಯಾದ ಪರವಾಗಿ ಸಿನಿಮಾ ಮಾಡುತ್ತಿದ್ದೀರಿ ಎಂಬ ಕಾರಣವೊಡ್ಡಿ ಗಲಾಟೆ ಮಾಡಿದರು. ಇದೇ ವೇಳೆ ಮತ್ತೆ ಕೆಲವರು ಬಂದು ನಮ್ಮ ಪರವಾಗಿ ಮಾತನಾಡಿ ನಮ್ಮನ್ನು ರಕ್ಷಿಸಿದರು ಎಂದು ಚಿತ್ರೀಕರಣದ ದಿನಗಳನ್ನು ಶಿವಣ್ಣ ನೆನಪಿಸಿಕೊಂಡರು.
Advertisement
ಕೆಲವರು ದೇಶಭಕ್ತಿಯ ಬಗ್ಗೆ ಮಾತನಾಡಿ ನಮ್ಮ ಮಾತೃ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಚೆಕಪ್ ನಡೆಯುತ್ತೆ, ಪೊಲೀಸ್ ಭದ್ರತೆಯೂ ಇರುತ್ತದೆ. ಆದರೂ ಮರುದಿನ ಬಾಂಬ್ ಬ್ಲಾಸ್ಟ್ ಆಗುತ್ತದೆ ಇದು ನಮ್ಮೊಳಗಿನ ವ್ಯವಸ್ಥೆಯ ತಂತ್ರಜ್ಞಾನದ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
Advertisement
ಥಿಯೇಟರ್‍ನಲ್ಲಿ ನಾನು ನನ್ನ ಸಿನಿಮಾ ನೋಡುವಾಗ ಬೇರೊಬ್ಬರ ಕಮೆಂಟ್‍ಗಳನ್ನು ಕೇಳುತ್ತಿರುತ್ತೇನೆ. ಅಲ್ಲಿ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಭಿಮಾನಿಗಳು ಮಾತ್ರ ಸಿನಿಮಾ ಬಗ್ಗೆ ಒಳ್ಳೆಯ ಮೆಚ್ಚುಗೆಯನ್ನು ನೀಡಿದ್ದಾರೆ. ಸಿನಿಮಾಗೆ ನಾಲ್ಕು ದಿನಗಳಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಅಂದ್ರು.
Advertisement
ಇದನ್ನೂ ಓದಿ: ಮಾಸ್ ಲೀಡರ್ ಸಿನಿಮಾ ವೀಕ್ಷಣೆ ಮಾಡಿದ ಶಿವಣ್ಣ- ಉಪ್ಪಿ ರಾಜಕೀಯ ಎಂಟ್ರಿಗೆ ಹೀಗಂದ್ರು
Advertisement