ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯಕ್ಕೆ ಆಹಾರ ಅರಸಿ ವಿದೇಶಿ ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬಂದಿವೆ.
20 ರಿಂದ 25 ಜಾತಿಯ ಪಕ್ಷಿಗಳು ಜಲಾಶಯದ ಹಿನ್ನಿರಿನಲ್ಲಿ ಕಲರವ ಸೃಷ್ಟಿಸಿವೆ. ಪ್ರತಿವರ್ಷ ಈ ವೇಳೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು ಈ ವರ್ಷ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿವೆ.
Advertisement
Advertisement
ಏಷಿಯನ್ ಓಪನ್ ಬಿಲ್, ಶೆಲ್‍ಡಕ್, ಬ್ಲಾಕ್ ವಿಂಗೆಡ್, ಸ್ತಿಲ್ಟ್ ಬ್ಲಾಕ್, ಸ್ಟಾರ್ಟ್ ಜಾತಿಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಮುಂಗೋಲಿಯಾ, ಟಿಬೆಟ್, ಚೀನಾ ಮೂಲದ ಪಕ್ಷಿಗಳು ಬೇಸಿಗೆ ಸಮಯದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಇದರಲ್ಲಿ ಬಾರ್ ಹೆಡೆಡ್ ಗೂಸ್ ಪಕ್ಷಿ 20 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ವಿಶಿಷ್ಟ ಜಾತಿಯ ಪಕ್ಷಿಯಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ
Advertisement
Advertisement
ಮಾರ್ಚ್ ಅಂತ್ಯದವರೆಗೆ ಇಲ್ಲೇ ಇರುವ ಈ ಪಕ್ಷಿಗಳು ಆಹಾರಕ್ಕಾಗಿ 20 ಕಿ.ಮೀವರೆಗೆ ಹಾರಿ ಶೇಂಗಾ, ಕಡಲೆ, ಅಲಸಂದೆ ಹಾಗೂ ಕೆರೆ ಕುಂಟೆಗಳಲ್ಲಿ ಹುಲ್ಲಿನ ಚಿಗುರು ತಿನ್ನುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬಂದಿರುವುದು ನೋಡುಗರ ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್