ರಾಯ್‍ಪುರ: ಬ್ಯಾಂಕ್ (Bank) ಮ್ಯಾನೇಜರ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು ಲಾಕರ್‌ನಲ್ಲಿದ್ದ 5.6 ಕೋಟಿ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದರೋಡೆಕೋರರು ದೋಚಿದ ಘಟನೆ ಛತ್ತೀಸ್‍ಗಢದ (Chhattisgarh) ರಾಯ್‍ಘರ್‌ನಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್ ಒಂದಕ್ಕೆ ನುಗ್ಗಿದ ಏಳು ಜನ ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರನ್ನು ತಡೆಯಲು ಯತ್ನಿಸಿದ ಬ್ಯಾಂಕ್ ಮ್ಯಾನೇಜರ್ ಕಾಲಿಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಅವರನ್ನು ಕೊಠಡಿಯೊಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ದರೋಡೆ ಮಾಡಲಾಗಿದೆ. ದರೋಡೆಕೋರರು ಹಣವನ್ನು ಬ್ಯಾಗ್‍ಗಳಲ್ಲಿ ತುಂಬಿಕೊಂಡು ಬಳಿಕ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಅಲ್ಲದೇ ಬ್ಯಾಂಕ್‍ನಿಂದ 15 ಕಿಮೀ ದೂರದಲ್ಲಿ ಬೈಕ್ ನಿಲ್ಲಿಸಿ ಬೇರೆ ವಾಹನಗಳಲ್ಲಿ ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸಂಕಷ್ಟ – ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾದ ಡಿಕೆಶಿ
ದರೋಡೆಕೋರರು ಲಾಕರ್‌ನಿಂದ ಕದ್ದ ಹಣ ಸುಮಾರು 4 ಕೋಟಿ ರೂ. ಎಂದು ಹೇಳಲಾಗಿದೆ. ಜೊತೆಗೆ 1.6 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದಾರೆ. ಬ್ಯಾಂಕ್ ಆಗಷ್ಟೇ ತೆರೆಯಲಾಗಿತ್ತು, ಈ ವೇಳೆ ಗ್ರಾಹಕರೂ ಇರಲಿಲ್ಲ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಆರೋಪಿಗಳು ಬ್ಯಾಂಕ್‍ಗೆ ನುಗ್ಗಿದ ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದರಿಂದ ಗ್ಯಾಂಗ್‍ನ ಕೃತ್ಯ ಸೆರೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ನಡೆದ ದೇಶದ ಅತಿದೊಡ್ಡ ಬ್ಯಾಂಕ್ ದರೋಡೆಗಳಲ್ಲಿ ಇದು ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]