5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ

Public TV
1 Min Read
FotoJet 8 18 e1677998884765

ನವದೆಹಲಿ: ಮಕ್ಕಳಿಗೆ ಆ್ಯಂಟಿಬಾಡಿ ಔಷಧ ಬೇಡ, 5 ವರ್ಷದವರೆಗೆ ಮಾಸ್ಕ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ  ಸರ್ಕಾರ ಕೋವಿಡ್‌ ಮಾಗ ಸೂಚಿಯನ್ನು ಹೊರಡಿಸಿದೆ. 5 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ. 6ರಿಂದ 11 ವಷದ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಪಾಲಕರು ನಿಗಾದಲ್ಲಿ ಮಾಸ್ಕ್‌ ಹಾಕಬೇಕು. 12ರಿಂದ 18ವಷದ ಮಕ್ಕಳು ದೊಡ್ಡವರಂತೆ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದೆ.

ಕೊರೊನಾ, ಓಮಿಕ್ರಾನ್ ಸೋಂಕು ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಟಿಗೆ ಪೂರಕವಾದ ಆ್ಯಂಟಿಬಾಡಿ ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಸ್ಟಿರಾಯ್ಡ್ ಅನ್ನು ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಸೀಮಿತವಾಗಿರಬೇಕು. ಮಕ್ಕಳು ಮತ್ತು ಅಪ್ರಾಪ್ತರಿಗೆ ಸಂಬಂಧಿಸಿದಂತೆ ಕೋವಿಡ್ ನಿರ್ವಹಣೆ ಕುರಿತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

mask 2

ಐದು ವರ್ಷ ಮತ್ತು ಅದಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಪಡಿಸಿಲ್ಲ. 6-11 ವರ್ಷದ ಮಕ್ಕಳು ಮಾಸ್ಕ್ ಬಳಸುವ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ, ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಬಹುದು. 5 ವರ್ಷ ಮೀರಿದವರು,  ವಯಸ್ಕರು ಕಡ್ಡಾಯವಾಗಿ ಧರಿಸುವಂತೆಯೇ ಮಾಸ್ಕ್ ಧರಿಸಬೇಕು ಎಂದು ಹೇಳಿದೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

download

ಸೋಂಕಿನ ತೀವ್ರತೆಯನ್ನು ಸೋಂಕಿನ ಲಕ್ಷಣ ಇಲ್ಲದಿರುವುದು, ಸಾಧಾರಣ, ಗಮನಿಸಬೇಕಾದುದು ಮತ್ತು ತೀವ್ರವಾದುದು ಎಂದು ವರ್ಗೀಕರಿಸಲಾಗಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗ. ಇವುಗಳ ನಿರ್ವಹಣೆಯಲ್ಲಿ (antimicrobial) ಆ್ಯಂಟಿಮೈಕ್ರೊಬಯುಲ್‍ಗಳ ಪಾತ್ರ ಇಲ್ಲ ಎಂದು ಹೇಳಿದೆ.

CHILDREN VACCINE

ಓಮಿಕ್ರಾನ್ ರೂಪಾಂತರ ತಳಿಯ ಕೋವಿಡ್ ಸೋಂಕು ಪ್ರಕರಣ ಏರಿಕೆಯ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಗುರುವಾರ ಕೊರೊನಾ ಮಾರ್ಗಸೂಚಿಗಳನ್ನು ಪರಿಷ್ಕರಿಸಿತು. ಇತರೆ ದೇಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಪ್ರಕಾರ, ಓಮಿಕ್ರಾನ್ ಸೋಂಕಿನ ಪರಿಣಾಮ, ತೀವ್ರತೆ ಕಡಿಮೆ ಆಗಿದೆ. ಪ್ರಸ್ತುತ ಏರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *