ಕೊರೊನಾ ಭೀತಿ ಮತ್ತೆ ಶುರುವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಒಂದಷ್ಟು ಕಠಿಣ ಕ್ರಮಗಳನ್ನು ತಗೆದುಕೊಂಡಿದ್ದು, ಚಿತ್ರಮಂದಿರಗಳಿಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ‘ಚಿತ್ರಮಂದಿರಕ್ಕೆ ಹೋಗುವವರು ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಹಾಕಿಕೊಳ್ಳದೇ ಚಿತ್ರಮಂದಿರಕ್ಕೆ ಬಂದರೆ, ಅವರಿಗೆ ಪ್ರವೇಶ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ.
Advertisement
ದೇಶಾದ್ಯಂತ ಮತ್ತೆ ಕೊರೊನಾ ಹಾವಳಿ ಶುರುವಾಗಿದೆ. ಈಗಿನಿಂದಲೇ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ರಾಜ್ಯ ಸರಕಾರ ತಗೆದುಕೊಳ್ಳಲಾಗುತ್ತಿದೆ. ತಜ್ಞರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ. ಕೇವಲ ಚಿತ್ರಮಂದಿರಗಳಿಗೆ ಮಾತ್ರವಲ್ಲ, ಹೊಸ ವರ್ಷಕ್ಕೂ ಒಂದು ಮಾರ್ಗಸೂಚಿ ಬಿಡುಗಡೆ ಆಗಿದ್ದು, ಸಭೆ ಸಮಾರಂಭದಲ್ಲೂ ಮಾಸ್ಕ್ ಹಾಕುವಂತೆ ಸೂಚಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
Advertisement
Advertisement
ಶಾಲಾ ಕಾಲೇಜುಗಳಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮಕ್ಕಳು ಬರಬೇಕು ಎಂದು ಸೂಚಿಸಿದೆ. ನ್ಯೂ ಇಯರ್ ಪಾರ್ಟಿಯನ್ನು ಮಧ್ಯರಾತ್ರಿ ಒಂದು ಗಂಟೆ ಒಳಗೆ ಮುಗಿಸಬೇಕು ಎಂದು ಹೇಳಲಾಗಿದ್ದು, ಒಂದು ಗಂಟೆ ಒಳಗೆ ಸಂಭ್ರಮವನ್ನು ಮುಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.